ಕರಾವಳಿ ಮಲೆನಾಡಿಗೆ ಹೊಂದುವ ಉತ್ತಮ ಗೇರು ತಳಿಗಳು
ಗೇರು ಒಂದು ವಿದೇಶಿ ವಿನಿಮಯ ಗಳಿಸುವ ವಾಣಿಜ್ಯ ಬೆಳೆ. ನಮ್ಮ ದೇಶದಲ್ಲಿ ಇದನ್ನು ಕೇರಳ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ, ಒರಿಸ್ಸಾ ಈಶಾನ್ಯ ರಾಜ್ಯಗಳು ಹಾಗೂ ಪಶ್ಚಿಮ ಬಂಗಾಳದಲ್ಲೆಲ್ಲಾ ಬೆಳೆಯಲಾಗುತ್ತಿದೆ. ಹೆಚ್ಚು ಪ್ರೊಟೀನ್ ಹಾಗೂ ಕಡಿಮೆ ಪ್ರಮಾಣದ ಶರ್ಕರ ಹೊಂದಿರುವ ಗೇರುಬೀಜಕ್ಕೆ ಪಾಶ್ಚಿಮಾತ್ಯ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಇದು ನಮ್ಮ ರಾಜ್ಯದ ಕರಾವಳಿ, ಮಲೆನಾಡು ಅರೆ ಮಲೆನಾಡು ಪ್ರದೇಶಗಳಿಗೆ ಚೆನ್ನಾಗಿ ಹೊಂದಿಕೆಯಾಗುವ ಬೆಳೆಯಾಗಿದೆ. ಕಡಿಮೆ ನೀರಿನಲ್ಲಿ ಬೆಳೆದು ಆದಾಯ ಕೊಡಬಲ್ಲ ಬೆಳೆ ಎಂದು…