ನೀವೇ ಮಾಡಬಹುದು- ಕರಿಮೆಣಸಿನ ಗಿಡ.
ಚಳಿಗಾಲ ಕಳೆದು ಬೇಸಿಗೆ ಬಂತೆಂದರೆ ಸಾಕು, ಸಸ್ಯಾಭಿವೃದ್ದಿಗೆ ಇದು ಸೂಕ್ತ ಕಾಲ. ಯಾವುದೇ ಸಸಿಯ ಸಸ್ಯಾಭಿವೃದ್ದಿಗೆ ಚಳಿಗಾಲ ಸೂಕ್ತವಲ್ಲ. ಈ ಸಮಯದಲ್ಲಿ ವಾತಾವರಣದಲ್ಲಿ ಆರ್ಧ್ರತೆ ಹೆಚ್ಚು ಇದ್ದು ಬೇರು ಬರಲು, ಕಸಿ ಕೂಡಲು ಇದು ಸೂಕ್ತ ಕಾಲಾವಧಿ.ಈ ಸಮಯದಲ್ಲಿ ಮಾಡಿದ ಸಸ್ಯಾಭಿವೃದ್ದಿಯಲ್ಲಿ 90% ಯಾಶಸ್ಸು ಸಾಧ್ಯ… ಯಾವ ಬಳ್ಳಿ ಸೂಕ್ತ: ನೆಲದಲ್ಲಿ ಹರಿದಾಡುವ ಹಬ್ಬು ಬಳ್ಳಿಗಳನ್ನು ಇದಕ್ಕಾಗಿ ಬಳಕೆ ಮಾಡಬೇಕು. ತೀರಾ ಎಳೆಯ ಬಳ್ಳಿಗಳು ಸೂಕ್ತವಲ್ಲ. ಸಾಧಾರಣ ಬೆಳೆದ ಬಳ್ಳಿಗಳನ್ನೇ ಆಯ್ಕೆ ಮಾಡಬೇಕು. ಹಬ್ಬು ಬಳ್ಳಿಗಳನ್ನು ಮೂಲ…