ಅಡಿಕೆ ಮರದಲ್ಲಿ ನಳ್ಳಿಗಳು ಯಾಕೆ ಉದುರುತ್ತವೆ?
ಅಡಿಕೆ ಮರದ ಹೂ ಗೊಂಚಲಿನಲ್ಲಿ ಇರುವ ಎಲ್ಲಾ ಮಿಡಿಗಳೂ ಕಾಯಿ ಕಚ್ಚಿಕೊಳ್ಳುವುದಿಲ್ಲ. ಸ್ವಲ್ಪ ಉದುರುತ್ತವೆ. ಹೆಚ್ಚಿನವು ಉಳಿಯುತ್ತದೆ. ಎಲ್ಲವೂ ಉದುರಿದರೆ , ಲೆಕ್ಕಕ್ಕಿಂತ ಹೆಚ್ಚು ಉದುರಿದರೆ ಆಗ ತಲೆ ಬಿಸಿ ಮಾಡುವ ಬದಲಿಗೆ ಕೆಲವು ನಿರ್ವಹಣೆ ಮಾಡಿ ಉಳಿಸುವ ಪ್ರಯತ್ನ ಮಾಡಬೇಕು. ಅಡಿಕೆ ಮರದ ಹೂ ಗೊಂಚಲಿನಲ್ಲಿ ಅಕ್ಕಿಯ ತರಹ ಇರುವಂತದ್ದು, ಗಂಡು ಹೂವು. ಕಡಲೆ ಗಾತ್ರದ ತರಹ ಇರುವಂತದ್ದು ಹೆಣ್ಣು ಹೂವು. ಹೂ ಗೊಂಚಲು ಅರಳಿದ ತಕ್ಷಣದಿಂದಲೇ ಗಂಡು ಹೂವು ಅರಳಲಾರಂಭಿಸುತ್ತದೆ. ಅದು ಸುಮಾರು 24…