ಡಿಜಿಟಲೀಕರಣದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದ ನಮ್ಮ ದೇಶದ ಜನಸಮೂಹ.
ಭಾರತ ಸರಕಾರದ ಡಿಜಿಟಲೀಕರಣ ದೇಶದಲ್ಲಿಹೊಸ ಆಯಾಮವನ್ನು ಸೃಷ್ಟಿಸಿದೆ. ನಮ್ಮ ಜನ ಇದಕ್ಕೆ ಒಗ್ಗಿಕೊಳ್ಳುತ್ತಿದ್ದಾರೆ. ನಮ್ಮೂರಿನ ಜನ ತರಕಾರಿ ಅಂಗಡಿಗೆ ಹೋದರೂ ಈಗ ಕೇಳುತ್ತಾರೆ, ಪೆಟಿಯಂ ಇದೆಯಾ,ಎಂದು.ಅಂಗಡಿಯವನಿಗೂ ಇದು ಒಂದು ಘನತೆಯ ವಿಷಯವಾಗಿದೆ.ಪಾನ್ ಬೀಡಾ ಅಂಗಡಿಯಲ್ಲೂ ಆನ್ ಲೈನ್ ಪೇಮೆಂಟ್. ಒಂದಲ್ಲ ಎರಡು ಮೂರು ಕಡೆ QR ಕೋಡ್ ಹಾಳೆ ನೇತಾಡಿಸಿರುತ್ತಾರೆ. ಅಂಗಡಿಯವರು ಹೇಳುತ್ತಾರೆ, ಹಿಂದೆ ನಾಳೆ ಕೊಡುತ್ತೇನೆ ಎಂದು ಸಾಲ ಕೊಂಡೋಗುವ ಪ್ರಶ್ಣೆ ಇಲ್ಲ. ಫೋನ್ ಹಿಡಿದು ತಟ್ಟನೆ ಹಣ ಹಾಕುತ್ತಾರೆ. ನಿಜ ಹಿಂದೆ ನಾವೆಲ್ಲಾ ಅಂಗಡಿಯಿಂದ…