ಅಂತರ್ಜಲ ಮಟ್ಟ ಏರಿಸಲು ಕಷ್ಟ ಇಲ್ಲ.
ಎಲ್ಲೆಡೆ ಆಂತರ್ಜಲ ಮಟ್ಟ ಕುಸಿದಿದೆ, ನಾಳೆಯ ನೀರಿಗಾಗಿ ಇಂದು ಚಿಂತನೆ ನಡೆಯುತ್ತಿದೆ.ನೀರಿನ ತೃಷೆ ತಣಿಸಲು ಆಂತರ್ಜಲ ಬಳಕೆ ಪ್ರಾರಂಭ ಆದ ನಂತರ ಅಂತರ್ಜಲ ಮಟ್ಟ ಕುಸಿಯಲಾರಂಭಿಸಿತು. ಜನ ಮಳೆ ಕಡಿಮೆಯಾಗಿದೆ, ಹವಾಮಾನ ವೈಪರೀತ್ಯ ಎಂದೆಲ್ಲಾ ಹೇಳುತ್ತಾ ಜಲ ಜಾಗೃತಿ ಮೂಡಿಸುತ್ತಿದ್ದಾರೆ. ವಾಸ್ತವಾಗಿ ಅಂತರ್ಜಲ ಮಟ್ಟ ಕುಸಿತಕ್ಕೆ ಕಾರಣ ಹಲವು ಇದೆ. ಇದರಲ್ಲಿ ಅತಿಯಾದ ನೀರಿನ ಬಳಕೆ ಒಂದು. ಅಂತರ್ಜಲ ಕೆಳಗಿಳಿಯಲು ಕಾರಣ: ಸರಳವಾಗಿ ಹೇಳಬೇಕೆಂದರೆ ಲೆಕ್ಕಕ್ಕಿಂತ ಮಿತಿ ಮೀರಿ ನೀರಿನ ಬಳಕೆ ಆದುದೇ ಅಂತರ್ಜಲ ಕುಸಿತಕ್ಕೆ ಕಾರಣ….