ಸಾವಯವ ಕೃಷಿ- ಇದು ವ್ಯವಸ್ಥಿತ ರಾಜಕೀಯ.
ರೈತರೇ ನೀವು ಕೃಷಿ ಮಾಡುವವರೇ ಹೊರತು ಪಕ್ಷ ಕಟ್ಟುವವರಲ್ಲ. ಪಕ್ಷ ಕಟ್ಟುವ, ರಾಜಕೀಯ ಮಾಡುವ ಮನೋಸ್ಥಿತಿಯವರು ನಾವಲ್ಲ. ನಾವು ಸಾಧ್ಯವಾದಷ್ಟು ಒಗ್ಗಟ್ಟಾಗುವ ಬಗ್ಗೆ ಶ್ರಮಿಸೋಣ. ನಮಗೆ ಯಾವ ವಿಧಾನದ ಕೃಷಿ ಲಾಭದಾಯಕ ಎಂದೆಣಿಸುತ್ತದೆಯೋ ಅದನ್ನು ಮಾಡೋಣ.. ಕೃಷಿ ಮಾಡುವುದು ನಮ್ಮ ಬದುಕುವ ದಾರಿಗಾಗಿಯೇ ಹೊರತು ಪ್ರಚಾರಕ್ಕಾಗಿ ಅಲ್ಲ ತಾನೇ? ಇಲ್ಲಿ ಇದರ ಪ್ರಸ್ತಾಪ ಯಾಕೆಂದರೆ ಕೃಷಿಕರು ಅವರ ಹೊಟ್ಟೆ ಪಾಡಿಗಾಗಿ ವೃತ್ತಿ ಮಾಡುವವರು. ಇವರ ಶ್ರಮದಲ್ಲಿ ಸ್ವಾರ್ಥ ಅಲ್ಲದೆ ಸಾಮಾಜಿಕ ಕಳಕಳಿಯೂ ಇದೆ. ಇದರಲ್ಲಿ ಮಧ್ಯಪ್ರವೇಶಕ್ಕೆ ಮೂರನೆಯವರಿಗೆ…