ಬೇಸಿಗೆ ಕಾಲದಲ್ಲಿ ನೀರೊತ್ತಾಯ ತಡೆಯಲು ಹೀಗೆ ಮಾಡಿಕೊಳ್ಳಿ.
ಬೇಸಿಗೆಯಲ್ಲಿ ಕೃಷಿಕರಿಗೆ ಹೊಲಕ್ಕೆ ನೀರುಣಿಸುವುದೇ ಕೆಲಸ. ಇಂದು ನೀರುಣಿಸಿದರೆ ನಾಳೆ ನೋಡುವಾಗ ಒಣಗಿರುತ್ತದೆ. ಅಷ್ಟೂ ನೀರನ್ನೂ ಬೆಳೆ ಸಸ್ಯಗಳು ಹೀರಿಕೊಳ್ಳುವುದಲ್ಲ. ಅದರಲ್ಲಿ ಮುಕ್ಕಾಲು ಪಾಲು ಆವಿಯಾಗಿ ವ್ಯಯವಾದರೆ ಕಾಲು ಪಾಲು ಮಾತ್ರ ಸಸ್ಯ ಬಳಕೆ ಮಾಡಿಕೊಳ್ಳುತ್ತದೆ. ಆವೀಕರಣ ತಡೆದರೆ ನೀರು ತುಂಬಾ ಕಡಿಮೆ ಸಾಕು. ಬೇಸಿಗೆ ಕಾಲ ಎಂದರೆ ಸೂರ್ಯನ ಪ್ರಖರ ಬಿಸಿಲಿಗೆ ಏನಿದ್ದರೂ ಒಣಗಿ ಹೋಗುವ ಕಾಲ. ಈ ಸಮಯದಲ್ಲಿ ಸಿಮೆಂಟ್ ನೆಲಕ್ಕೆ 1 ಲೀ. ನೀರು ಚೆಲ್ಲಿದರೆ ಅದು ಆವಿಯಾಗಲು ಆಗಲು 1 ಗಂಟೆ…