ಕರಿಮೆಣಸಿನ ಫಸಲಿಗೆ ವಾತಾವರಣದ ಅನುಕೂಲ ಅಗತ್ಯ.
ಮುಂಗಾರು ಮಳೆ ಪ್ರಾರಂಭದಲ್ಲಿ ಕರಿ ಮೆಣಸು ಹೂವು ಕರೆ ಬಿಡುವ ಸಮಯ. ಮೊದಲ ಮಳೆ ಸಿಂಚನವಾದ ಕೂಡಲೇ ಬಳ್ಳಿ ಚಿಗುರಲು ಪ್ರಾರಂಭವಾಗುತ್ತದೆ. ಕೆಲವು ಸ್ವಲ್ಪತಡವಾಗುತ್ತದೆ. ಮತ್ತೆ ಕೆಲವು ಮೇ ತಿಂಗಳ ಕೊನೆಗೇ ಹೂವು ಕರೆ ಬಿಡಲು ಪ್ರಾರಂಭವಾಗುತ್ತದೆ. ಇದು ಬಳ್ಳಿಯ ಆರೋಗ್ಯ ಮತ್ತು ತಳಿಯ ಮೇಲೆ ಅವಲಂಭಿತವಾಗಿದೆ. ತಂಪು ವಾತಾವರಣ ಬೇಕು: ಕರಿಮೆಣಸಿನಲ್ಲಿ ಹೂವು ಕರೆ ಬಿಡುವಾಗ ತಂಪು ವಾತಾವರಣ ಇರಬೇಕು. ಹಾಗಿದ್ದಾಗ ಅದು ಫಲಿತಗೊಂಡು ಕಾಳುಗಳಾಗುತ್ತದೆ. ಒಂದು ವೇಳೆ ಬಿಸಿ ವಾತಾವರಣ ಇದ್ದರೆ ಕರೆಗಳು ಅರ್ಧಂಬರ್ಧ…