ರೋಗ ರಹಿತ ಕರಿಮೆಣಸಿನ ಸಸಿ ಮಾಡುವ ವಿಧಾನ.
ನಮಗೆಲ್ಲಾ ಗೊತ್ತಿರುವ ಕರಿಮೆಣಸಿನ ಸಸ್ಯೋತ್ಪಾದನೆಗಿಂತ ಭಿನ್ನವಾದ ಸಸ್ಯಾಭಿವೃದ್ದಿ ವಿಧಾನ ಬೀಜದಿಂದ ಸಸ್ಯೋತ್ಪಾದನೆ ಮಾಡುವುದು. ಬಳ್ಳಿ ತುಂಡುಗಳಿಂದ ಸಸ್ಯೋತ್ಪಾದನೆ ಮಾಡುವುದು ತುಂಬಾ ಸುಲಭ. ಇದನ್ನು ಪಾಲಿಥೀನ್ ಚೀಲಗಳಲ್ಲಿ ಊರಿ ಬೇರು ಬರಿಸಿ ಸಸಿಮಾಡಿಯೂ ನೆಡಬಹುದು. ನೇರವಾಗಿ ಬಳ್ಳಿ ತುಂಡುಗಳನ್ನು ಬೇಕಾದಲ್ಲಿ ನೆಟ್ಟೂ ಸಹ ಸಸ್ಯಾಭಿವೃದ್ದಿ ಮಾಡಬಹುದು. ಇದರಲ್ಲಿ ಎಷ್ಟು ಅನುಕೂಲಗಳು ಇವೆಯೋ ಅಷ್ಟೇ ಅನನುಕೂಲಗಳೂ ಇವೆ. ಮೆಣಸಿನ ಬೇಸಾಯದಲ್ಲಿ ಅತೀ ದೊಡ್ಡ ಸಮಸ್ಯೆ ಎಂದರೆ ಸೊರಗು ರೋಗ. ಮತ್ತು ಜಂತು ಹುಳ. ಇವೆರಡೂ ಸಸ್ಯ ಸಾಮಾಗ್ರಿಯ ಮೂಲಕ ಪ್ರಸಾರವಾಗುತ್ತದೆ….