ಹೂವು ಗೊಂಚಲು ಚೆನ್ನಾಗಿ ಬರಲು ರಂಜಕ ಗೊಬ್ಬರ ಅಗತ್ಯ.
ಕರಾವಳಿ ಮಲೆನಾಡಿನಲ್ಲಿ ಅಡಿಕೆ , ತೆಂಗು, ಕರಿಮೆಣಸು ಬೆಳೆಗಾರರು ಕೊಳೆ ರೋಗಕ್ಕೆ ರಾಮಬಾಣವಾಗಿ ಬಳಸಿದ್ದ ಪೊಟ್ಯಾಶಿಯಂ ಫೋಸ್ಪೋನೇಟ್ ಎಂಬ ತಯಾರಿಕೆಯಲ್ಲಿ ಇದ್ದದ್ದು ಬಹುಪಾಲು ರಂಜಕ. ಇದು ಸಸ್ಯಗಳಿಗೆ ರೋಗ ನಿರೋಧಕ ಶಕ್ತಿ ಕೊಡುವ ತಾಕತ್ತು ಇದೆ. ಸರಿಯಾದ ಪ್ರಮಾಣದಲ್ಲಿ ಇದನ್ನು ಕೊಟ್ಟರೆ ಅದು ಫಸಲು ಹೆಚ್ಚಳಕ್ಕೂ ಸಹಾಯಕ. ಸಸ್ಯಕ್ಕೆ ಜೀವ ಕೊಡುತ್ತದೆ: ಒಂದು ಸಸ್ಯ ಬದುಕಬೇಕಾದರೆ ಅದಕ್ಕೆ ಬೇರು ಬರಲೇ ಬೇಕು. ಈ ಬೇರು ಬರಲು ಪ್ರೇರಣೆ ಕೊಡುವ ಪೊಷಕ ಎಂದರೆ ಅದು ರಂಜಕ. ಇದು ಸಸ್ಯಗಳಿಗೆ…