ನಿಮ್ಮ ಹೊಲದಲ್ಲಿ ರಂಜಕ ಎಷ್ಟು ಲಭ್ಯ ಸ್ಥಿತಿಯಲ್ಲಿದೆ- ತಿಳಿಯುವುದು ಹೀಗೆ.
ಎಲ್ಲದಕ್ಕೂ ತಜ್ಞರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯುವ ಬದಲು ನಾವೇ ಒಂದಷ್ಟು ತಜ್ಞತೆಯನ್ನು ಸಂಪಾದಿಸುವುದು ಉತ್ತಮ. ಈ ನಿಟ್ಟಿನಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ ಸಸ್ಯಗಳಿಗೆ ದೊರೆಯುತ್ತದೆಯೇ ಎಂದು ತಿಳಿಯುವ ಸರಳ ವಿಧಾನಗಳು ಇವೆ. ನಿಮ್ಮ ಹೊಲದ ದ್ವಿದಳ ಸಸ್ಯಗಳು, ಅಧಿಕ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆಯೋ ಅಲ್ಲಿ ರಂಜಕ ಅಂಶ ಇದೆ ಎಂದರ್ಥ. ಇದು ನಿಖರವಾದ ಲಕ್ಷಣ ಅಲ್ಲದಿದ್ದರೂ ಬಹುತೇಕ ಇದು ರಂಜಕದ ಲಭ್ಯತೆಯನ್ನು ಸೂಚಿಸುತ್ತದೆ. ರಂಜಕಾಂಶ ಎಂಬುದು ಫಲಾಪೇಕ್ಷೆ ಇದ್ದು ಬೆಳೆ ಬೆಳೆಯುವಾಗ ನಿರೀಕ್ಷಿತ…