ಅಡಿಕೆ- ಈ ರೀತಿಯಾಗಿ ಯಾಕೆ ಉದುರುತ್ತಿದೆ?
ಈ ವರ್ಷ ಅಡಿಕೆ ಬೆಳೆಗಾರರು ಬಹಳ ಸಮಸ್ಯೆಯನ್ನು ಅನುಭವಿಸಿದ್ದಾರೆ. ಮೊದಲು ಸಿಂಗಾರ ಒಣಗುವ ಸಮಸ್ಯೆ , ನಂತರ ಮಿಡಿ ಕಾಯಿ ಉದುರುವುದು, ಈಗ ಮತ್ತೆ ಬಲಿಯುತ್ತಿರುವ (ಹಸ) ಕಾಯಿಗಳ ಉದುರುವಿಕೆ. ಬರೇ ಉದುರುವುದು ಮಾತ್ರವಲ್ಲ. ಕಾಯಿಯಲ್ಲಿ ಸುಟ್ಟಂತಹ ಕಪ್ಪು ಕಲೆಗಳಿವೆ. ಕೊಳೆತ ಇಲ್ಲ. ಇದು ಯಾವ ಸಮಸ್ಯೆ ಎಂಬುದು ನಿಘೂಢವಾಗಿದೆ. ಒಬ್ಬೊಬ್ಬರು ಒಂದೊಂದು ರೀತಿಯ ಅಭಿಪ್ರಾಯ ಹೇಳುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ಅದೇನೂ ಮಹಾ ಮಳೆಯೋ, ಅಡಿಕೆಗೆ ಭಾರೀ ಕೊಳೆ ರೋಗ ಬಂತು. ಸುಮಾರು 25-30% ಬೆಳೆ ನಷ್ಟವಾಯಿತು. ಈ…