ಇದು 75% ದಷ್ಟು ನೀರು ಉಳಿಸುವ ವಿಧಾನ.
ಬೇಸಿಗೆ ಬಂದರೆ ಸಾಕು .ನೀರು- ನೀರಾವರಿ, ನೀರಿನ ಕೊರತೆ. ದಿನಾ ಇದೇ ಕೆಲಸ. ಬೇಸಿಗೆ ಬಂದರೆ ಸಾಕು ಎಲ್ಲೂ ಹೋಗುವಂತಿಲ್ಲ. ನೀರಾವರಿಯದ್ದೇ ತಲೆಬಿಸಿ. ಇಷ್ಟೆಲ್ಲಾ ನೀರುಣಿಸಿದರೆ ಅಂತರ್ಜಲ ಯಾಕೆ ಭೂ ಗರ್ಭದ ಪಾತಾಳ ಜಲಕ್ಕೂ ಹೋಗಬೇಕಾಗ ಬಹುದು. ಇದಕ್ಕೆ ಪರಿಹಾರ ಎಷ್ಟು ಬೇಕೋ ಅಷ್ಟು ನೀರು ಕೊಟ್ಟು, ಆವೀಕರಣವನ್ನು ಶೂನ್ಯ ಮಾಡುವುದು. ಆವೀಕರಣ ತಡೆದರೆ ಸಸ್ಯಕ್ಕೆ ಬೇಕಾಗುವ ನೀರು ತುಂಬಾ ಕಡಿಮೆ. ಮಳೆ ಹಿಂದಿನಂತಿಲ್ಲ: ಪ್ರಕೃತಿಯ ನಡೆ ಹೇಗಿರುತ್ತದೆ ಎಂದು ಬಲ್ಲವರಾರೂ ಇಲ್ಲ. ಮಳೆ ಬಂದರೆ ಬಂತು….