ಕೊಳೆ ರೋಗ ಓಡಿಸಿದ ಬಯೋ ಔಷಧಿಗಳ ಹಿಂದಿನ ರಹಸ್ಯ.

ಅಡಿಕೆ ಬೆಳೆಗಾರರಿಗೆ ಕೊಳೆ ರೋಗ ನಿಯಂತ್ರಣ ಆದರೆ ದೊಡ್ದ ಪರೀಕ್ಷೆ ಪಾಸ್. ಇದನ್ನು ಪಾಸ್ ಮಾಡಿಸಿದ ಔಷಧಿಯೇ  ಬಯೋ ಔಷಧಿಗಳು.  ಏನು ಹೆಸರೋ, ಒಳಗೆ ಏನು ಇರುವುದೋ ಯಾರಿಗೂ ಗೊತ್ತಿಲ್ಲ. ಸಾವಯವ, ಜೈವಿಕ, ಹರ್ಬಲ್ ಎಂಬ ಹೆಸರಿನಲ್ಲಿ ರೈತರ ಉದ್ದಾರಕ್ಕೆ ಅದೆಷ್ಟೋ ಜನ ಬಂದರು,  ಹೋದರು. ಅಡಿಕೆಯ ಕೊಳೆ ರೋಗ ನಿಯಂತ್ರಣಕ್ಕೆ ಬೆಳೆಗಾರರು ವ್ಯಯಿಸುವ ಮೊತ್ತ ಕೋಟ್ಯಾಂತರ ರೂಪಾಯಿಗಳು. ನಮ್ಮ ಅಡಿಕೆ ತೋಟಗಳಿಗೆ  ಏನಿಲ್ಲವೆಂದರೂ 10,000 ಟನ್ ಗೂ ಹೆಚ್ಚು ಮೈಲುತುತ್ತೆ ಬೇಕಾಗುತ್ತದೆ. ಇದನ್ನು ಮನಗಂಡ ಕೆಲವರು…

Read more

ಕೀಟನಾಶಕ ಇಲ್ಲದೆ ಅಡಿಕೆ ಉಳಿಸಬಹುದು.

ಕೀಟನಾಶಕ ಬಳಸದೆ ಅಡಿಕೆ ಉಳಿಸಿಕೊಂಡವರು ಇದ್ದಾರೆ. ಕೆಲವರು ಅಡಿಕೆ ಮಿಡಿ ಉಳಿಸಲು ಪ್ರತೀ ಹೂ ಗೊಂಚಲಿಗೂ ತಿಂಗಳು ತಿಂಗಳು ಕೀಟ ನಾಶಕ ಸಿಂಪಡಿಸುವವರೂ ಇದ್ದಾರೆ. ಸಿಂಪಡಿಸದವರಲ್ಲೂ ಫಸಲು ಇದೆ. ಸಿಂಪಡಿಸಿದಲ್ಲಿಯೂ ಫಸಲು ಇದೆ. ಹೀಗಿರುವಾಗ ಅಡಿಕೆ ಮರದ ಆರೋಗ್ಯ ಹೊಂದಿಕೊಂಡು ಹೂ ಗೊಂಚಲಿನಲ್ಲಿ ಮಿಡಿ ಕಾಯಿ ಉಳಿಯುತ್ತದೆ ಎಂದರೆ ತಪ್ಪಾಗಲಾರದು. ಅಡಿಕೆ ಮರದ ಹೂ ಗೊಂಚಲಿಗೆ ಬರುವ ಕೀಟಗಳಲ್ಲಿ ಈ ತನಕ ಗುರುತಿಸಲಾದದ್ದು, ಸಿಂಗಾರ ತಿನ್ನುವ ಕಂಬಳಿ ಹುಳ. ಬಸವನ ಹುಳ ಪೆಂಟಟೋಮಿಡ್  ಬಗ್. ಇದಲ್ಲದೆ ಬೇರೆ…

Read more
error: Content is protected !!