
ಕಲ್ಲಿನ ಕೂರೆಯ ಹುಡಿಯೂ ಉತ್ತಮ ಗೊಬ್ಬರ ಗೊತ್ತೇ?
ಸಸ್ಯ ಪೋಷಕವಾಗಿ ನಮಗೆ ರಾಕ್ ಫೋಸ್ಫೇಟ್ ಬಳಕೆ ಗೊತ್ತು.ಇದು ಕಲ್ಲಿನ ಹುಡಿ. ಅದೇ ರೀತಿ ನಮ್ಮ ಸುತ್ತಮುತ್ತ ಬೇರೆ ಬೇರೆ ಶಿಲೆಗಳನ್ನು ಕಾಣಬಹುದು. ಶಿಲೆಗಳೆಲ್ಲವೂ ಜ್ವಾಲಾಮುಖಿಯ ಮೂಲಕ ಸೃಷ್ಟಿಯಾದವುಗಳು. ಅದರಲ್ಲಿ ಬೆಳೆ ಪೋಷಣೆಗೆ ಬೇಕಾಗುವ ವಿವಿಧ ಪೋಷಕಾಂಶಗಳು ಇವೆ. ಇದನ್ನುಮೊತ್ತ ಮೊದಲ ಬಾರಿಗೆ ಮಂಡ್ಯದ ಕೃಷಿ ಮಹಾವಿಧ್ಯಾಲಯದ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಭೂಮಿಯ ಮೇಲಿರುವ ಪ್ರತಿಯೊಂದು ಜೀವರಾಶಿಯ ಅಸ್ತಿತ್ವಕ್ಕೆ ಮಣ್ಣೇ ಆಧಾರ. ಬೆಳೆಗಳಿಗೆ ಮರಗಿಡಗಳಿಗೆ ಆಸರೆ ನೀಡುತ್ತದೆ. ಪೋಷಕಾಂಶವನ್ನು ಒದಗಿಸುತ್ತದೆ. ನೀರನ್ನುಹಿಡಿದಿಟ್ಟುಕೊಂಡು ಬೇಕಾದಾಗ ಪೂರೈಸುತ್ತದೆ. ಮಣ್ಣು ಸಕಲ ಪೋಷಕಾಂಶಗಳನ್ನೂ…