ಅಡಿಕೆ- ಕರಿಮೆಣಸು ಬೆಳೆಗಳ ತೋಟಕ್ಕೆ ಅಗತೆ, ಉಳುಮೆ ವರ್ಜ್ಯ.
ಅಡಿಕೆ ಮರಗಳ ಬೇರುಗಳು ಮೆತ್ತನೆಯ ಮೇಲ್ಮಣ್ಣಿನಲ್ಲಿ ಹರಡಿ ಬೆಳೆಯುವ ಗುಣದ ಸಸ್ಯಗಳು. ಆದ ಕಾರಣ ಮೇಲು ಭಾಗವನ್ನು ಅಗತೆ, ಉಳುಮೆ ಮಾಡುವುದರಿಂದ ಬೇರಿಗೆ ಹಾನಿಯಾಗುತ್ತದೆ. ಅಲ್ಲದೆ ಬೇರೆ ಬೇರೆ ತೊಂದರೆಗಳೂ ಉಂಟಾಗುತ್ತವೆ.ಅಡಿಕೆ ಮರದ ಬುಡದಲ್ಲಿ ಕರಿಮೆಣಸು ಇದ್ದರೆ ಯಾವ ಕಾರಣಕ್ಕೂ ಬುಡ ಭಾಗವನ್ನು ಕೆರೆಯುವುದೂ ಸಹ ಮಾಡಬಾರದು. ಇದರಿಂದ ಕರಿಮೆಣಸಿನ ಬಳ್ಳಿ ಸಾಯಬಹುದು, ಅಥವಾ ಸೊರಗಬಹುದು. ಬುಡ ಬುಡಿಸುವುದು ಹಳೆ ಪದ್ದತಿ: ನಮ್ಮ ಹಿರಿಯರು ತಿಳಿದೋ ತಿಳಿಯದೆಯೋ ಕೆಲವು ಬೇಸಾಯ ಕ್ರಮಗಳನ್ನು ಅನುಸರಿಸುತ್ತಿದ್ದರು. ಅದರಲ್ಲಿ ಒಂದು ಬುಡ…