ತೆಂಗಿಗೆ ವಿಷ ಕೊಟ್ಟರೆ ಎಳನೀರು ಸಿಹಿಯಾಗುವುದೇ?
ತೆಂಗಿನ ಕಾಯಿಯ, ಎಳೆಕಾಯಿಯ ನೀರು ಸಿಹಿಯಾಗಿರಲಿ ಅದರ ತಳಿ ಗುಣ ಕಾರಣ ಹೊರತು ಅದನ್ನು ಹೊರ ವಸ್ತುಗಳನ್ನು ಸೇರಿಸಿ ಸಿಹಿ ಮಾಡಲು ಸಾಧ್ಯವಿಲ್ಲ. ತೆಂಗಿನ ಕೆಲವು ತಳಿಗಳು ಸಿಹಿಯಾದ ಎಳನೀರನ್ನು ಕೊಡುತ್ತವೆ. ಮತ್ತೆ ಕೆಲವು ಸ್ವಲ್ಪ ಸಪ್ಪೆ. ಇದು ಯಾರೂ ಮಾಡುವುದು ಅಲ್ಲ. ಅದು ಅದರ ಅಂತರ್ಗತ ಗುಣ. ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಸಿಹಿ ಹೆಚ್ಚಿಸಲು ಸೂಕ್ಷ್ಮ ಪೊಷಕಾಂಶ ಮತ್ತು ಪೊಟ್ಯಾಶಿಯಂ ಬಳಕೆ ನೆರವಾಗುತ್ತದೆಯಾದರೂ ಯಾವ ಕೀಟನಾಶಕ ರೋಗ ನಾಶಕ ಇದನ್ನು ಹೆಚ್ಚಿಸುವುದಿಲ್ಲ. ಇತ್ತೀಚೆಗೆ ಒಂದು ವಾಟ್ಸ್…