ಬೆಳೆಗಳಿಗೆ ಸುಣ್ಣ ಯಾಕೆ ಕೊಡಬೇಕು ಗೊತ್ತೇ?
ಬೆಳೆ ಬೆಳೆಸುವ ಮಣ್ಣಿಗೆ ಸುಣ್ಣ ಹಾಕುವುದು ಹಸಿರು ಕ್ರಾಂತಿಯ ತರುವಾಯ ಬಂದ ಪದ್ಧತಿ. ಮಣ್ಣಿಗೆ ಸುಣ್ಣ ಹಾಕಿದಾಗ ಮಣ್ಣಿನ ಸ್ಥಿತಿಗತಿ ಬದಲಾವಣೆಯಾಗುತ್ತದೆ. ಈ ಬದಲಾವಣೆ ಅಲ್ಲಿ ಬೆಳೆಯುವ ಸಸ್ಯಗಳಿಗೆ ಮಣ್ಣಿನ ಮೂಲಕ ಪೋಷಕಾಂಶಗಳನ್ನು ಸಮರ್ಪಕವಾಗಿ ಬಳಕೆ ಮಾಡುವುದಕ್ಕೆ ಸಹಕರಿಸುತ್ತದೆ. ಸಸ್ಯಗಳಿಗೆ ಬರೇ ಸಾರಜಕನ, ರಂಜಕ ಮತ್ತು ಪೊಟ್ಯಾಶ್ ಎಂಬ ಮೂರು ಮುಖ್ಯ ಪೋಷಕಗಳು ಬೇಕು. ಅದರ ಜೊತೆಗೆ ದ್ವಿತೀಯ ಮಧ್ಯಮ ಪೋಷಕಗಳಾದ ಕ್ಯಾಲ್ಸಿಯಂ ಗಂಧಕ, ಮತ್ತು ಮೆಗ್ನೀಶಿಯಂ ಸಹ ಅಗತ್ಯವಾಗಿ ಬೇಕಾಗುತ್ತದೆ. ಇವು ಮುಖ್ಯ ಪೋಷಕಗಳಷ್ಟು ಪ್ರಮಾಣದಲ್ಲಿ…