
ಶ್ರೀಗಂಧದ ಬೆಳೆಗೆ ಆಸರೆ ಸಸ್ಯಗಳು
ಶ್ರೀಗಂಧ ಸಸಿ ಕೊಳ್ಳುವಾಗ ಅದರ ಜೊತೆಗೆ ಒಂದು ತೊಗರಿ ಗಿಡ ಉಚಿತವಾಗಿ ದೊರೆಯುತ್ತದೆ. ಇದು ಯಾಕೆಂದರೆ ಶ್ರೀಗಂಧಕ್ಕೆ ಪಾಸಾಡಿ ( ಜೊತೆ ಸಸ್ಯ) ಇದ್ದರೆ ಮಾತ್ರ ಅದಕ್ಕೆ ಬದುಕು. ಶ್ರೀಗಂಧದ ಬೇರು ಇನ್ನೊಂದು ಸಸ್ಯದ ಬೇರಿನಿಂದ ಆಹಾರವನ್ನು ಪಡೆದು ಬದುಕುವ ವಿಶಿಷ್ಟ ಸಸ್ಯ. ಹಾಗೆಂದು ಇದು ಬದನಿಕೆ ಸಸ್ಯವಲ್ಲ. ಬದನಿಕೆ ಸಸ್ಯವು ತಾನು ಆಸರೆ ಪಡೆದ ಸಸ್ಯವನ್ನು ಕೊಲ್ಲುತ್ತದೆ. ಇದು ಸಹಜೀವನ ನಡೆಸುತ್ತದೆ. ಜೊತೆಗೆ ಬೆಳೆದ ಸಸ್ಯವೂ ಬದುಕಿಕೊಳ್ಳುತ್ತದೆ. ಶ್ರೀಗಂಧಕ್ಕೆ ಆಸರೆ ಸಸ್ಯಗಳ ಬಗ್ಗೆ ಅಧ್ಯಯನ ನಡೆಸಿದ…