ಶ್ರೀಗಂಧದ ಹೊಲದಲ್ಲಿ ನಿರಂತರ ಆದಾಯ.
ಶ್ರೀಗಂಧ ಒಂದು ನಮ್ಮ ಕಾಡು ಬೆಟ್ಟಗಳಲ್ಲಿ ಬೆಳೆಯುವ ಸಸ್ಯ ಸಂಕುಲದ ತರಹದ್ದೇ ಆದ ಸಸ್ಯ. ಇದು ಬೇರೆ ಸಸ್ಯಗಳನ್ನೂ ಬೆಳೆಯಲು ಬಿಡುತ್ತದೆ. ಯಾವುದೇ ಜೀವ ವೈವಿಧ್ಯಕ್ಕೆ ಇದರಿಂದ ತೊಂದರೆ ಇಲ್ಲ. ಬೆಳೆ ಕಠಾವಿನ ತನಕವೂ ಒಂದಷ್ಟು ಆದಾಯವನ್ನು ಈ ಹೊಲದಲ್ಲಿ ಪಡೆಯುತ್ತಲೇ ಇರಬಹುದು. ಶ್ರೀಗಂಧ ಎಂದರೆ ಅದು ಕಲ್ಪ ವೃಕ್ಷದ ತರಹವೇ. ಇದರ ಪ್ರತೀಯೊಂದೂ ಭಾಗವೂ ಸಹ ಉಪಯುಕ್ತ ಮತ್ತು ಅದರಲ್ಲಿ ಔಷಧೀಯ ಗುಣಗಳೂ ಇವೆ. ಆದ ಕಾರಣ ಶ್ರೀಗಂಧ ಬೆಳೆದ ಹೊಲ ಎಂದರೆ ಅದು ಸದಾ…