ಶ್ರೀಗಂಧ ಬೆಳೆದ ರೈತರಿಗೆ ಎಷ್ಟು ಆದಾಯ ಸಿಗುತ್ತದೆ?
ಶ್ರೀ ಗಂಧ ಬೆಳೆಯಲು ಇಡೀ ಭಾರತ ದೇಶದ ರೈತರು ತುದಿಗಾಲಲ್ಲಿದ್ದಾರೆ. ಈಗಾಗಲೇ ದೇಶದಾದ್ಯಂತ 80,000 ಹೆಕ್ಟೇರುಗಳಲ್ಲಿ ಶ್ರೀಗಂಧ ಬೆಳೆಯುತ್ತಿದೆ. ನಮ್ಮ ರಾಜ್ಯದಲ್ಲಿ ಇದು 30,000 ಹೆಕ್ಟೇರಿಗೂ ಹೆಚ್ಚು ಇದೆ. ಶ್ರೀಗಂಧವನ್ನು ಇತರ ಕೃಷಿ ಉತ್ಪನ್ನ ಮಾರಾಟ ಮಾಡಿದಂತೆ ಮಾರಾಟ ಮಾಡಲಿಕ್ಕೆ ಆಗುವುದಿಲ್ಲ. ಸರಕಾರ ನಿರ್ಧರಿಸಿದ ಖರೀದಿ ದಾರರಿಗೆ ಮಾತ್ರ ಮಾರಾಟ ಮಾಡಬೇಕು.. ನಮ್ಮ ರಾಜ್ಯದಲ್ಲಿ ಶ್ರೀಗಂಧವನ್ನು ಖರೀದಿ ಮಾಡುವವರು ಕರ್ನಾಟಕ ರಾಜ್ಯ ಅರಣ್ಯ ಇಲಾಖೆ, ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಮತ್ತು ಮೈಸೂರು ಸೇಲ್ಸ್ ಇಂಟರ್ ನ್ಯಾಶನಲ್…