ರೈತರ ಮಕ್ಕಳಿಗೆ ಸ್ಕಾಲರ್ಶಿಪ್ ನೂತನ ಮುಖ್ಯ ಮಂತ್ರಿಗಳ ಕೊಡುಗೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪನವರೇ ರೈತರಿಗೆ ಕೊಡುವುದರಲ್ಲಿ ಎತ್ತಿದ ಕೈಯಾದರೆ ಈಗಿನ ಹೊಸ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಬಸವರಾಜ ಬೊಮ್ಮಾಯಿಯವರೂ ಅವರಿಗಿಂತ ಏನೂ ಕಡಿಮೆ ಇಲ್ಲ. ಇಂದು (28-07-2021) ರಂದು ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನೇರಿದ ಶ್ರೀ ಬಸವರಾಜ್ ಬೊಮ್ಮಾಯಿಯವರು ರೈತರಿಗೆ ಏನು ಕೊಡುವುದು ಎಂದು ಯೋಚಿಸಿ ಹೊಸತಾಗಿ ಯಾರೂ ಕೊಡದೆ ಇರುವ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ರೈತರ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ರೂ.1000 ಕೋಟಿಯನ್ನು ಮಿಸಲಿಟ್ಟು ಹೊಸ ದಾಖಲೆ ಮಾಡಿದ್ದಾರೆ. ಶ್ರೀಯುತ ಎಸ್…