ಅಡಿಕೆ ಸಸಿ ನೆಡುವಾಗ ಮುಖ್ಯವಾಗಿ ಅರಿತುಕೊಳ್ಳಬೇಕಾದ ವಿಚಾರ.
ನಾನು ಅಡಿಕೆ ಸಸಿ ಹಾಕಿದ್ದೀನೆ. ಸಾವಿರ ಸಾವಿರ ಲೆಕ್ಕ ಕೊಡಬಹುದು. ಎಂಬುದಾಗಿ ಜನ ಹೇಳುತ್ತಾರೆ. ಒಂದು ವರ್ಷದ ನಂತರ ನೆಟ್ಟ ಗಿಡದಲ್ಲಿ ಹಲವು ಗಿಡ ಸತ್ತು ಹೋಗಿದೆ ಎನ್ನುತ್ತಾರೆ. ಕೆಲವು ಗಿಡ ಮಾತ್ರ ಚೆನ್ನಾಗಿ ಬೆಳೆದಿದೆ. ಉಳಿದವು ನೆಟ್ಟ ಹಾಗೆ ಇದೆ ಎನ್ನುತ್ತಾರೆ. ಇದಕ್ಕೆ ಕಾರಣ ಮತ್ತೇನೂ ಅಲ್ಲ. ಪಾಲನೆಯಲ್ಲಿ ನಿರ್ಲಕ್ಷ್ಯ. ಎಳೆಯ ಪ್ರಾಯದಲ್ಲಿ ಸಸಿಗಳನ್ನು ಬೆಳೆಸುವುದು ಒಂದು ತಪಸ್ಸಿನ ತರಹ. ಗಿಡ ನೆಟ್ಟು ಬಿಟ್ಟು, ನೀರಾವರಿ ಮಾಡಿ ಗೊಬ್ಬರ ಕೊಟ್ಟರೆ ಸಾಲದು. ಎಳೆಯ ಪ್ರಾಯದಲ್ಲಿ ಅದನ್ನು ನಿತ್ಯ ಗಮನಿಸುತ್ತಿದ್ದು,…