ನೀವು ಕೃಷಿಕರಾಗಿದ್ದರೆ ಇದನ್ನು ಒಮ್ಮೆ ಓದಿ. ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ.
ಒಬ್ಬ ಸರಕಾರಿ ನೌಕರನಿಗೆ ಸಾಯುವ ತನಕ ಸರಕಾರ ಜೀವನ ಬಧ್ರತೆ ಕೊಡುತ್ತದೆ. ಕೃಷಿಕ ತನ್ನ ಜೀವನಕ್ಕೆ ಬಧ್ರ ಅಡಿಪಾಯವನ್ನು ತಾನೇ ಹಾಕಿಕೊಳ್ಳಬೇಕಾಗುತ್ತದೆ. ಪ್ರತೀಯೊಬ್ಬ ಕೃಷಿಕನೂ ತನ್ನ ದುಡಿಯುವ ವಯಸ್ಸು ಮೀರಿದ ನಂತರ ಏನು ಎಂದು ಎಂಬುದನ್ನು ದುಡಿಯುವ ವಯಸ್ಸು ಇರುವಾಗ ಯೋಚಿಸಬೇಕು. ಮತ್ತು ಅದಕ್ಕೆ ಬೇಕಾದ ಅಡಿಪಾಯವನ್ನು ಹಾಕಬೇಕು. ಸಾಮಾನ್ಯವಾಗಿ ಸಾಧಿಸುವುದೇನಾದರೂ ಇದ್ದರೆ ಅದನ್ನು 50 ವರ್ಷಗಳ ಒಳಗೇ ಸಾಧಿಸಿ ಮುಗಿಸಬೇಕು. ಆ ನಂತರ ಮಾಡಬಾರದೆಂದೇನೂ ಇಲ್ಲ. ಅದೆಲ್ಲವೂ ಪ್ಲಸ್. ಆದರೆ ಅದಕ್ಕಿಂತ ಮುಂಚೆ ಮಾಡಿದರೆ ಒಳ್ಳೆಯದು…