
ಅಡಿಕೆ ಮಾರುಕಟ್ಟೆಯ ಗ್ರಹಣ ಮೋಕ್ಷ – ಬೆಲೆ ಏರಿಕೆ ಶುರು.
ಅಡಿಕೆ ಮಾರುಕಟ್ಟೆ ವರ್ಷದುದ್ದಕ್ಕೂ ಏಕಪ್ರಕಾರವಾಗಿ ಇರುವುದಿಲ್ಲ. ಒಮ್ಮೆ ಗ್ರಹಣ ಹಿಡಿದು ಬೆಲೆ ಕುಸಿಯುತ್ತದೆ. ಮತ್ತೆ ಗ್ರಹಣ ಮೋಕ್ಷ ಕಾಲ ಬಂದೇ ಬರುತ್ತದೆ. ಅಡಿಕೆ ಮಾರಾಟವಾಗಿ ಹಣ ಕೈಗೆ ಬರುವ ತನಕ ಗ್ರಹಣ ಕಾಲವೂ, ಹಣ ಬರಲಾರಂಭಿಸಿದ ತರುವಾಯ ಅದು ಮುಗಿಯುವ ತನಕ ಗ್ರಹಣ ಮೋಕ್ಷವೂ ನಡೆಯುತ್ತಾ ಇರುತ್ತದೆ. ಇವುಗಳ ಮಧ್ಯೆ ರೈತರು ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಬೇಕಾಗುತ್ತದೆ. ಸಪ್ಟೆಂಬರ್ ತಿಂಗಳಲ್ಲಿ ಮತ್ತೆ ಕೆಂಪಡಿಕೆ ಧಾರಣೆ ಸ್ವಲ್ಪ ಚೇತರಿಗೆ ಪ್ರಾರಂಭವಾಗಿದೆ. ಚಾಲಿಗೆ ಸ್ವಲ್ಪ ನೆರಳು ಕವಿದಿದೆ. ಅನಿರ್ಧಿಷ್ಟಾವಧಿಯ ತನಕ…