ಮಣ್ಣು ಪರೀಕ್ಷೆಗೆ ಮಾದರಿಯನ್ನು ತೆಗೆಯುವ ವಿಧಾನ
ಮನುಷ್ಯನ ದೇಹಾರೋಗ್ಯವನ್ನು ಕೆಲವು ಪರೀಕ್ಷೆಗಳಿಗೆ ಒಳಪಡಿಸಿ ಅನಾರೋಗ್ಯ ಪತ್ತೆ ಮಾಡಿ ಅದರ ಪ್ರಕಾರ ಚಿಕಿತ್ಸೆ ಮಾಡಲಾಗುತ್ತದೆ. ಹೀಗೆ ಮಾಡಿದಾಗ ಅದರ ಫಲಿತಾಂಶ ಕರಾರುವಕ್ಕಾಗಿರುತ್ತದೆ. ಅದೇ ರೀತಿಯಲ್ಲಿ ಬೆಳೆಗಳಿಗೆ ಕೊಡುವ ಯಾವುದೇ ಪೋಷಕಗಳನ್ನು ಸಸ್ಯಕ್ಕೆ ಅಗತ್ಯವಿದ್ದರೆ ಮಾತ್ರ ಕೊಟ್ಟರೆ ಒಳ್ಳೆಯದು. ಯಾವುದು ಇದೆ, ಯಾವುದರ ಕೊರತೆ ಇದೆ, ಎಷ್ಟು ಕೊಡಬೇಕು ಎಂಬುದನ್ನು ಮಣ್ಣು ಪರೀಕ್ಷೆ ಮಾಡಿ ತಿಳಿಯಲಾಗುತ್ತದೆ. ಮಣ್ಣು ಎಂಬುದು ಪ್ರಕೃತಿದತ್ತ ಅಮೂಲ್ಯ ಸಂಪತ್ತು. ನಾವು ಬೆಳೆಸುವ ಬೆಳೆಗಳಿಗೆಲ್ಲಾ ಮಣ್ಣೇ ಮೂಲಾಧಾರ. ಮಣ್ಣಿನ ಆರೋಗ್ಯ ಹದಗೆಟ್ಟರೆ ಬೆಳೆಗಳ ಹಾಗೂ…