ನಾವು ತಿನ್ನುವ ಆಹಾರ ರುಚಿ ಇರುವುದಿಲ್ಲ ಕಾರಣ ಇಷ್ಟೇ
ಮಣ್ಣು ಫಲವತ್ತಾಗಿದ್ದರೆ ಅದರಲ್ಲಿ ಬೆಳೆದ ಬೆಳೆಯ ಗುಣಮಟ್ಟ ಉತ್ತಮವಾಗಿರುತ್ತದೆ. ಅದಕ್ಕೆ ರುಚಿಯೂ ಇರುತ್ತದೆ. ಆರೋಗ್ಯಕ್ಕೂ ಉತ್ತಮ. ಮಣ್ಣಿಗೆ ಜೀವ ಇದೆ.ಇದು ಕೃಷಿಗೆ ಜೀವ ಕೊಡುತ್ತದೆ . ಮಣ್ಣಿನಲ್ಲಿ ಅನೇಕ ಪೋಷಕಾಂಶಗಳು ಮತ್ತು ಕಣ್ಣಿಗೆ ಕಾಣದ ಸೂಕ್ಷ್ಮ ಜೀವಿಗಳು ಸೇರಿಕೊಂಡಿವೆ . ಮಣ್ಣು ಇಲ್ಲದೆ ಯಾವುದೇ ಜೀವಿ ಬದುಕಲು ಸಾಧ್ಯವಿಲ್ಲ. ಅದೇ ರೀತಿ ಯಾವುದೇ ಜೀವಿ ಇಲ್ಲದೇ ಮಣ್ಣು ಆಗಲು ಸಾಧ್ಯವಿಲ್ಲ. ಒಂದು ಇಂಚು ಮಣ್ಣು ಆಗಬೇಕಾದರೆ ಸಾವಿರಾರು ವರ್ಷಗಳೇ ಬೇಕಾಗುತ್ತದೆ. ಇಂದು ಅವೈಜ್ಞಾನಿಕ ರಾಸಾಯನಿಕಗಳ ಬಳಕೆಯಿಂದ ಮಣ್ಣು,…