ಮಣ್ಣು ಪರೀಕ್ಷೆ -ನಿಮ್ಮ ಸ್ವ ಅನುಭವದಲ್ಲೇ ಮಾಡಬಹುದು.
ಮಣ್ಣು ಪರೀಕ್ಷೆ ಮಾಡುವುದರಿಂದ ಗೊಬ್ಬರವನ್ನು ಎಷ್ಟು ಬಳಸಬೇಕು, ಯಾವುದು ಬೇಕು, ಯಾವುದು ಬೇಕಾಗಿಲ್ಲ ಎಂಬುದು ತಿಳಿಯುತ್ತದೆ. ಇದು ಸತ್ಯವಾದರೂ ಮಣ್ಣು ಎಂಬುದು ಕಾಲಕಾಲಕ್ಕೆ ಸ್ಥಿತಿಗತಿ ಬದಲಾವಣೆಯಾಗುವ ಕಾರಣ ಅದನ್ನು ಹೇಗೆ ಪರೀಕ್ಷಿಸಿ ಅದನ್ನು ತಿಳಿಯುವುದು ಎಂಬುದೇ ಪ್ರಶ್ನೆ. ಇದಕ್ಕೆಇರುವ ಉತ್ತರ ರೈತರೇ ಪರೀಕ್ಷೆ ವಿಚಾರದಲ್ಲಿ ತಜ್ಞತೆ ಹೊಂದುವುದು. ಹಾಗೆಂದು ಮಣ್ಣು ಪರೀಕ್ಷೆ ಎಂಬುದು ಬೇಡ ಎಂದಲ್ಲ. ಅನುಕೂಲ ಇದ್ದವರು ಇದನ್ನು ಸಮೀಪದ ಕೃಷಿ ಇಲಾಖೆಯಲ್ಲಿ ಮಾಡಿಸಿಕೊಳ್ಳಬಹುದು. ಕೆಲವು ಖಾಸಗಿ ಮಣ್ಣು ಪರೀಕ್ಷಾ ಪ್ರಯೋಗಾಲಯದಲ್ಲಿ ಮಾಡಿಸಿಕೊಳ್ಳಬಹುದು. ಕೆಲವು ಭಾರತ…