ಇಪಿಎನ್ (EPN) ಸಿಂಪಡಿಸಿ- ಬೇರು ಹುಳ ನಿಯಂತ್ರಿಸಿ.
ಬೇರು ಹುಳ ಎಂಬುದು ಪ್ರಕೃತಿಯಲ್ಲಿಯೇ ಇರ್ವ ಒಂದು ಜೀವಿ. ನಿಸರ್ಗದಲ್ಲಿರುವ ಬೇರೆ ಬೇರೆ ಸಸ್ಯಗಳಿಗೆ ಬೇರೆ ಬೇರೆ ನಮೂನೆಯ ಬೇರು ಹುಳಗಳು ತೊಂದರೆ ಮಾಡುತ್ತವೆ. ಹಾಗೆಯೇ ಪ್ರಕೃತಿಯಲ್ಲಿ ಅದನ್ನು ನಾಶಮಾಡುವ ಜೀವಿಯೂ ಇದೆ. ಅಂತಹ ಒಂದು ಜೀವಿ EPN. ಇದನ್ನು ಹೊಲದಲ್ಲಿ ಬಿಡುವುದರಿಂದ ಅವು ನೈಸರ್ಗಿಕವಾಗಿ ಬೇರು ಹುಳವನ್ನು ನಾಶ ಮಾಡುತ್ತವೆ. ಇದು ಸಕಾಲ: ಮೇ ತಿಂಗಳಲ್ಲಿ ಬೇರು ಹುಳದ ದುಂಬಿ ಭೂಮಿಯಿಂದ ಹೊರಬಂದು ಗಂಡು ಹೆಣ್ಣು ಜೋಡಿಯಾಗಿ ಮತ್ತೆ ಮಣ್ಣಿಗೆ ಸೇರಿ ಅಲ್ಲಿ ಮೊಟ್ಟೆ…