
ಕಾಂಪ್ಲೆಕ್ಸ್ ಗೊಬ್ಬರ – ನೇರ ಗೊಬ್ಬರ ಯಾವುದು ಒಳ್ಳೆಯದು.
ಮಾರುಕಟ್ಟೆಯಲ್ಲಿ ಲಭ್ಯವಾಗುವ ಕಾಂಪ್ಲೆಕ್ಸ್ ಗೊಬ್ಬರ ಮತ್ತು ನೇರ ಗೊಬ್ಬರ ಇವೆರಡರ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿದೆ. ಕೆಲವರಿಗೆ ಗೊತ್ತಿಲ್ಲ. ರೈತರಾದವರಿಗೆ ಇದು ಒಂದು ಎರಡನೇ ಕ್ಲಾಸಿನ ಪಾಠ. ಸಣ್ಣ ಕ್ಲಾಸಿನಲ್ಲಿ ಮಗ್ಗಿ ಹೇಗೆ ಬಾಯಿಪಾಠ ಬರಬೇಕೋ ಅದೇ ತರಹ ಕೃಷಿಕರಾದವರಿಗೆ ಬೆಳೆ ಪೋಷಕ ಗೊಬ್ಬರ ಮತ್ತು ಅದರ ಸತ್ವಗಳ ಬೆಗ್ಗೆ ಗೊತ್ತಿರಬೇಕು. ಈ ಮಟ್ಟಕೆ ರೈತ ಬೆಳೆದರೆ ತುಂಬಾ ಉಳಿತಾಯವನ್ನೂ ಮಾಡಬಹುದು. ಅಧಿಕ ಇಳುವರಿಯನ್ನೂ ಪಡೆಯಬಹುದು. ಹಿಂದೆ ನಾವು ಅಕ್ಕಿ ಉಪ್ಪಿಟ್ಟು ಮಾಡಬೇಕಿದ್ದರೆ ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ…