ಸಾಗುವಾನಿ ಮರದ ಬುಡದ ಮಣ್ಣು ಬಂಗಾರ.
ನಿಮ್ಮಲ್ಲಿ ಸಾಗುವಾನಿ ಮರ ಇದೆಯೇ , ಅದರ ಬುಡದಲ್ಲಿ ಬಿದ್ದ ತರಗೆಲೆಯ ಅಡಿಯ ಮಣ್ಣನ್ನು ಒಮ್ಮೆ ಗಮನ ಇಟ್ಟು ನೋಡಿ. ಇದು ಫಲವತ್ತಾದ ರಸಸಾರ ತಟಸ್ಥ ಇರುವ ಮೆಕ್ಕಲು ಮಣ್ಣಾಗಿರುತ್ತದೆ. ಸಾಗುವಾನಿ ಮರದ ಎಲೆಗಳು ಮಣ್ಣನ್ನು ಫಲವತ್ತಾಗಿಸುತ್ತದೆ, ಹಾಗೆಯೇ ಮಣ್ಣಿನ pH ಅನ್ನು ಸರಿಮಾಡಿಕೊಡುತ್ತದೆ. ಸಾಗುವಾನಿ ಮರದ ಬುಡದಲ್ಲಿ ಎಲ್ಲಾ ನಮೂನೆಯ ಸೂಕ್ಷ್ಮ ಜೀವಿಗಳು ಇರುತ್ತವೆ ಎಂಬುದಾಗಿ ಕೇರಳದ ಅರಣ್ಯ ಸಂಶೊಧಾನ ಸಂಸ್ಥೆಯ ವಿಜ್ಞಾನಿಗಳು ಹೇಳುತ್ತಾರೆ. ಇದರ ಎಲೆಯ ಗಾತ್ರ, ಅದರ ತೂಕ, ಅದು ಕರಗುವ ವೇಗ…