ಸರಕಾರೀ ವ್ಯವಸ್ಥೆಗಳಲ್ಲೂ ಇಷ್ಟು ವ್ಯಾಪಾರ ಬೇಕೇ?
ಮೊನ್ನೆ ಸುಬ್ರಮಣ್ಯ ಸಮೀಪದ ನೆಟ್ಟಣದ ಕೇಂದ್ರೀಯ ತೋಟದ ಬೆಳೆಗಳ ಸಂಶೊಧಾನ ಸಂಸ್ಥೆಯ ಬೀಜ ಕೇಂದ್ರಕ್ಕೆ ತೆಂಗಿನ ಸಸಿ ತರಲು ಹೋಗಿದ್ದೆ. ಇಲ್ಲಿ ಆದ ಅನುಭವ ಯಾಕೋ ರೈತರ ಜೊತೆ ಹಂಚಿಕೊಳ್ಳಬೇಕೆನಿಸುತ್ತಿದೆ. ಸರಕಾರೀ ವ್ಯವಸ್ಥೆಗಳಲ್ಲಿ ಇಷ್ಟೊಂದು ವ್ಯಾಪಾರ ಬೇಕಾ?. ಬೀಜ- ಸಸಿ ಎಂಬ ರೈತರ ಭವಿಷ್ಯದ ಇನ್ವೆಸ್ಟ್ಮೆಂಟ್ ನಲ್ಲಿ ಯಾರೂ ಮಕ್ಕಳಾಟಿಕೆ ಮಾಡಬಾರದು. ಒಂದು ಕುಬ್ಜ ತಳಿಯ ಬೀಜದ ತೆಂಗಿನ ಕಾಯಿ. ಬೆಲೆ ಎಷ್ಟು ಗೊತ್ತೇ? ಬರೋಬ್ಬರಿ 120 ರೂ. ಒಂದು ಸಸಿಯ ಬೆಲೆ ಎಷ್ಟು ಗೊತ್ತೇ 210…