ಬೋರ್ವೆಲ್ ರೀಚಾರ್ಜ್ ಎಲ್ಲಿ ಮಾಡಬಹುದು?
ಅಂತರ್ಜಲ ಎಂಬ ಕರೆನ್ಸಿ ಅತಿಯಾಗಿ ಬಳಕೆ ಮಾಡಿ ಮುಗಿಯುತ್ತಿದೆ.ಅದಕ್ಕೆ ಮತ್ತೆ ರೀ ಚಾರ್ಜ್ ಮಾಡಬಹುದು ಎನ್ನುತ್ತಾರೆ ಸ್ವಘೋಷಿತ ತಜ್ಞರು. ಇದನ್ನು ಹಲವಾರು ಜನ ಮಾಡಿದ್ದಾರೆ. ಕೆಲವರು ಒಳ್ಳೆಯದಾಗಿದೆ ಎನ್ನುತ್ತಾರೆ ಕೆಲವರು ನಿರಾಶರಾದದ್ದೂ ಇದೆ. ಒಟ್ಟಿನಲ್ಲಿ ನಿಮ್ಮ ಕೊಳವೆ ಬಾವಿ ಮಳೆಗಾಲದಲ್ಲಿ ನೀರನ್ನು ಕುಡಿಯುವ ಸ್ಥಿತಿಯಲ್ಲಿದ್ದರೆ ಅದಕ್ಕೆ ಸೋಸು ವ್ಯವಸ್ಥೆಗಳ ಮೂಲಕ ನೀರನ್ನು ಮರು ಪೂರಣ ಮಾಡುವುದರಲ್ಲಿ ತಪ್ಪಿಲ್ಲ. ಅಂತರ್ಜಲಕ್ಕೆ ಮರು ಪೂರಣ ಸಾಧ್ಯವೇ: ಭೂಮಿಯ ಒಳಗೆ ಶಿಲಾ ಪದರಗಳ ಕೆಲವು ಬಿರುಕುಗಳಲ್ಲಿ ನೀರು ಇರುತ್ತದೆ. ಇನ್ನು ಕೆಲವು…