ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ.
ಕಲ್ಲಂಗಡಿ ಬೆಳೆಗಾರರಾದ ಹಿರಿಯಡ್ಕದ ಸುರೇಶ್ ರವರು ಹೇಳುತ್ತಾರೆ ಈ ವರ್ಷ ಯಾವ ಗ್ರಹಚಾರವೋ ತಿಳಿಯದು. 14 ಎಕ್ರೆಯಲ್ಲಿ ಮಾಡಿದ ಕಲ್ಲಂಗಡಿಯನ್ನು ಯಾರಿಗೆ ಮಾರುವುದೋ , ಯಾರು ಕೊಳ್ಳುವವರೋ ಗೊತ್ತಾಗುತ್ತಿಲ್ಲ. ಈ ನಷ್ಟವನ್ನು ಹೇಗೆ ಹೊಂದಿಸಿಕೊಳ್ಳುವುದು ಎಂದೇ ತಿಳಿಯುತ್ತಿಲ್ಲ ಎನ್ನುತ್ತಾರೆ. ಉಡುಪಿಯಿಂದ ಹೊನ್ನಾವರ ತನಕ ವ್ಯಾಪಿಸಿರುವ ಸಾವಿರ ಎಕ್ರೆಗೂ ಮಿಕ್ಕಿದ ಕಲ್ಲಂಗಡಿ ಬೆಳೆಗಾರರ ಕಣ್ಣೀರ ಕಥೆ ಹೀಗೆಯೇ. ಅದೇ ರೀತಿ ರಾಜ್ಯದುದ್ದಕ್ಕೂ ಕಲ್ಲಂಗಡಿ ಬೆಳೆದವರ ಪಾಡು ಹೇಳ ತೀರದು. ಈ ವರ್ಷ ಯುಗಾದಿಯ ತರುವಾಯ ಮೇ ತನಕ ಕಲ್ಲಂಗಡಿಗೆ…