ಮುಂದಿನ ಹಂಗಾಮಿಗೆ ಬೆಳೆ ಯೋಜನೆ ಬದಲಾಯಿಸಿಕೊಳ್ಳಿ.
ರೈತರೇ ಮುಂದಿನ ವರ್ಷದ ಪರಿಸ್ಥಿತಿ ತುಂಬಾ ಅನಿಶ್ಚಿತವಾಗಿದ್ದು, ಕೆಲವು ಆಯ್ದ ಬೆಳೆಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಬೇಕೇ ಬೇಡವೇ ಎಂದು ಎರಡೆರಡು ಬಾರಿ ಯೋಚಿಸಿ ಮುನ್ನಡೆಯಿರಿ. ಒಂದೆಡೆ ಕೊರೋನಾ ಮಹಾಮಾರಿ ಮನುಕುಲವನ್ನು ಅಟ್ಟಾಡಿಸುವಂತೆ ಕಾಣಿಸುತ್ತದೆ. ಇದು ಕಳೆದ ವರ್ಷಕ್ಕೆ ಮುಗಿಯಲಿಲ್ಲ, ಈ ವರ್ಷವೂ ವಕ್ಕರಿಸಿದೆ. ಇದು ಬೇಗ ಮುಗಿಯುವಂತೆ ಕಂಡು ಬರುವುದಿಲ್ಲಅ ಮುಂದೆ ಏನು ಎಂದು ಪ್ರಶ್ಣೆಯಾಗಿಯೇ ಇದೆ. ಹವಾಮಾನ ಸಹ ತನ್ನ ಮಾಮೂಲು ಚಕ್ರವನ್ನು ಬದಲಿಸಿದಂತಿದೆ. ಮುಂಗಾರು ಸಹ ಕೈಕೊಡಬಹುದೇನೋ ಅನ್ನಿಸುತ್ತಿದೆ. ಪೆಟ್ರೋಲ್ –ಡೀಸೆಲ್ ಬೆಲೆ ಗಗನಕ್ಕೇರಿದೆ.ಸರಕಾರವೂ…