
ಹಾಲಿ ವರ್ಷದಲ್ಲಿ 50% ಅಡಿಕೆ ಉತ್ಪಾದನೆ ಕೊರತೆ. ಬೆಲೆ ಏರುವ ಸಾಧ್ಯತೆ.
ಹಾಲೀ ವರ್ಷದ ಹವಾಮಾನ ವೈಪರೀತ್ಯದ ಕಾರಣ ಅಡಿಕೆಯ ಸಾಂಪ್ರದಾಯಿಕ ಬೆಳೆ ಪ್ರದೇಶಗಳಲ್ಲಿ 50% ಫಸಲು ನಷ್ಟವಾಗಿದ್ದು, ಈ ನಷ್ಟ ಇನ್ನೂ ಒಂದೆರಡು ಮುಂದುವರಿಯುವ ಸಾಧ್ಯತೆ ಇದೆ.ಈಗಾಗಲೇ ಅಡಿಕೆ ತೋಟಗಳು ನೀರಿಲ್ಲದೆ, ನೀರು ಇದ್ದೂ ಹಾಳಾಗಿದೆ. ಅಡಿಕೆ ಮರಗಳಲ್ಲಿ ಗರಿಗಳು ಒಣಗಿವೆ. ಹೂಗೊಂಚಲು ಕರಟಿ ಹೋಗಿವೆ, ಬೆಳೆಗಾರರು ಮರ ಉಳಿದರೆ ಸಾಕು ಎನ್ನುವ ಸ್ಥಿತಿಗೆ ಬಂದಿದ್ದಾರೆ. ಅಡಿಕೆ ಬೆಳೆಗಾರರ ಪಾಲಿಗೆ ಈ ವರ್ಷದ ಹವಾಮಾನ ವೈಪರೀತ್ಯ ಅತೀ ದೊಡ್ಡ ನಷ್ಟವನ್ನು ಉಂಟುಮಾಡಿದೆ. ದಕ್ಷಿಣ ಕನ್ನಡ, ನೆರೆಯ ಕಾಸರಗೋಡು, ಉಡುಪಿ,…