ಪರಿಸರದೊಂದಿಗೆ ಬದುಕಿದರೆ ಮಾತ್ರ ನಮಗೆ ಉಳಿಗಾಲ
ಪರಿಸರ ಎಂಬುದು ಮನುಷ್ಯನಿಗಿಂತ ಮುಂಚೆಯೇ ಸೃಷ್ಟಿಯಾಗಿದೆ. ಇದನ್ನು ಹಾಳು ಮಾಡಲು ಮನುಷ್ಯ ಮಾತ್ರರಿಂದ ಸಾಧ್ಯವಿಲ್ಲ. ಒಂದು ವೇಳೆ ಏನಾದರೂ ಕೆಣಕಲು ಹೋದರೆ ಅದು ತಿರುಗಿ ಬೀಳುತ್ತದೆ. ಪ್ರಕೃತಿ ತನ್ನದೇ ಆದ ವ್ಯವಸ್ಥೆಗಳ ಮೂಲಕ ತನ್ನನ್ನು ತಾನು ರಕ್ಷಿಸಿಕೊಳ್ಳುತ್ತದೆ. ಅದರೊಂದಿಗೆ ಬದುಕಿದರೆ ಮಾತ್ರ ನಮಗೆ ಉಳಿಗಾಲ. ಇಂದು ಆಗುತ್ತಿರುವ ಕೆಲವು ಅನಾಹುತಗಳು, ಮನುಕುಲಕ್ಕೆ ಎದುರಾಗಿರುವ ಕೆಲವು ಸಂಧಿಗ್ಧ ಪರಿಸ್ಥಿತಿಗಳು ಇವೆಲ್ಲಾ ಪ್ರಕೃತಿಯ ಮುನಿಸೇ ಹೊರತು ಬೇರೇನೂ ಅಲ್ಲ. ಪ್ರಕೃತಿ ಮನಸ್ಸು ಮಾಡಿದರೆ ಸಾಂಕ್ರಾಮಿಕ ರೋಗ ಇರಲಿ, ಬರ ಇರಲಿ…