ನಮ್ಮ ಪರಿಸರದಲ್ಲಿ ಇರುವ ಕಿಟಗಳಲ್ಲಿ 20% ಮಾತ್ರ ಹಾನಿಕರಕ ಕೀಟಗಳು. ಉಳಿದ 80% ಉಪಕಾರೀ ಕೀಟಗಳು ಎಂಬುದನ್ನು ಕೀಟಶಾಸ್ತ್ರ ಒಪ್ಪಿಕೊಳ್ಳುತ್ತದೆ. ಆದರೆ ಕೆಲವೊಂದು ವಿಚಾರದಲ್ಲಿ ಮಾತ್ರ ಮೌನವಾಗಿದೆ. ಕೀಟ ಶಾಸ್ತ್ರಜ್ಞರಿಗೆ ಮತ್ತು ಪರಿಸರ ಕಳಕಳಿ ಉಳ್ಳವರಿಗೆ ಕನಿಷ್ಟ ತಮ್ಮ ಅಭಿಪ್ರಾಯವನ್ನಾದರೂ ಬಹಿರಂಗವಾಗಿ ತಿಳಿಸುವ ಜವಾಬ್ಧಾರಿ ಇದೆ. ಅವರು ಮಾತಾಡಬೇಕು. ಆಗಲೇ ಈ ಸಮಸ್ಯೆ ಪರಿಹಾರ ಆಗುತ್ತದೆ.
- ಇತ್ತೀಚಿನ ದಿನಗಳಲ್ಲಿ ಕೀಟಗಳ ಹಾವಳಿ ಬಹಳ ಜಾಸ್ತಿಯಾಗತೊಡಗಿದೆ.
- ಕೀಟನಾಶಕ ಬಳಸದೆ ಕೃಷಿ ಮಾಡುತ್ತೇನೆ ಎಂಬುದರ ಹಿಂದಿನ ಸತ್ಯಾಸತ್ಯತೆ ದೇವರಿಗೆ ಮಾತ್ರ ಗೊತ್ತು.
- ಈ ಪ್ರಮಾಣದಲ್ಲಿ ಕೀಟಗಳು ಹೆಚ್ಚಳವಾಗಲು ಕಾರಣ ಮತ್ತೇನೂ ಅಲ್ಲ, ಅದರ ಪರಭಕ್ಷಕಗಳ ಅವನತಿ.
- ಯಾಕೆ ಪರ ಭಕ್ಷಕಗಳು ಅವನತಿಯಾದವು , ಯಾವ ಕಾರಣ ಇರಬಹುದು ಎಂಬ ಬಗ್ಗೆ ತಕ್ಷಣ ಅಧ್ಯಯನ ಪ್ರಾರಂಭವಾಗಬೇಕಿದೆ,
ಮುಂದಿನ ಕೆಲವೇ ವರ್ಷಗಳಲ್ಲಿ ಕೀಟನಾಶಕವನ್ನು ರೈತರು ದಿನಾಲೂ ಸಿಂಪಡಿಸಬೇಕಾದ ಅನಿವಾರ್ಯತೆ ಬರುತ್ತದೆ. ಜನತೆಯ ದೇಹದ ಎಲ್ಲಾ ಜೀವ ಕೋಶಗಳಲ್ಲಿ ಕೀಟನಾಶಕದ ಉಳಿಕೆ ಉಂಟಾಗಿ ಒಂದೋ ಮನುಷ್ಯನ ಅಂತರ್ಗತ ಶಕ್ತಿ ( immune system) ಕೀಟನಾಶಕಗಳಿಗೆ ಒಗ್ಗಿಕೊಳ್ಳಬೇಕು, ಇಲ್ಲವೇ ಆಸ್ಪತ್ರೆಗಳನ್ನು ಹೆಚ್ಚು ಹೆಚ್ಚು ಕಟ್ಟಿಸಬೇಕಾಗಬಹುದು.
ಯಾವ ಕಾರಣಕ್ಕೆ ಕೀಟಗಳು ಹೆಚ್ಚುತ್ತಿವೆ:
- ಒಂದು ಬೀದಿ ದೀಪದ ಅಡಿಯಲ್ಲಿ ಐದು ನಿಮಿಷ ನಿಂತು ಗಮನಿಸಿ.
- ಲಕ್ಷಾಂತರ ಸಂಖ್ಯೆಯ ಕೀಟಗಳು ದೀಪದ ಬೆಳಕಿಗೆ ಸುತ್ತಾಡುತ್ತಾ ನೆಲಕ್ಕೆ ಬಿದ್ದು ಸಾಯುತ್ತವೆ.
- ಇಂತಹ ದೀಪಗಳು ಎಷ್ಟು ಇರಬಹುದೋ, ಅದೆಲ್ಲಾ ದೀಪಗಳ ಬಳಿಗೂ ಕೀಟಗಳು ರಾತ್ರೆ ಬಂದೇ ಬರುತ್ತವೆ.
- ದಿನಂಪ್ರತೀ ಲಕ್ಷಾಂತರ ಸಂಖ್ಯೆಯ ಕೀಟಗಳು ನೆಲಕ್ಕೆ ಬಿದ್ದು, ಇರುವೆಗಳು, ಮತ್ತು ಸರೀಸೃಪಗಳು (Reptiles)ತಿಂದು ನಾಶವಾಗುತ್ತವೆ.
- ಈ ರೀತಿ ಸತ್ತು ಹೋಗುವ ಕಿಟಗಳಲ್ಲಿ ಉಪಕಾರಿ ಕೀಟಗಳೆಷ್ಟು , ಉಪದ್ರವಕಾರಿಗಳೆಷ್ಟು ಎಂಬುದನ್ನು ದಾಖಲಿಸಿದವರಿಲ್ಲ.
- ಊರಿನ ಉಸಾಬರಿ ನಮಗ್ಯಾಕೆ ಎಂದು ಯಾರೂ ಇದರ ಸೊಲ್ಲೆತ್ತುವುದಿಲ್ಲ.
- ಈ ವರ್ಷ ಬೆಂಗಳೂರಿನ ಜಿಕೆವಿಕೆ ಕ್ಯಾಂಪಸ್ ನಲ್ಲಿ ನಡೆಯುವ ಕೀಟಪ್ರಪಂಚ ಎಂಬ ವೈವಿಧ್ಯಮಯ ಕೀಟಗಳ ಪ್ರದರ್ಶನಕ್ಕೆ ಹೋಗಿದ್ದಾಗ ಕೆಲವು ವಿಚಾರಗಳು ನನ್ನ ಕಣ್ಣು ತೆರೆಯಿತು.
- ನಾವು ಬಹಳಷ್ಟು ಉಪಕಾರೀ ಕೀಟಗಳನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದು.
- ಕೀಟಗಳಲ್ಲಿ ಇರುವಷ್ಟು ವೈವಿಧ್ಯತೆ ಬಹುಷಃ ಪ್ರಪಂಚದಲ್ಲಿ ಬೇರೆ ಯಾವ ಜೀವಿಗಳಲ್ಲೂ ಇರಲಿಕ್ಕಿಲ್ಲವೇನೋ?
- ಆಳವಾಗಿ ಈ ಪ್ರದರ್ಶನದಲ್ಲಿ ತಿಳಿಸಲಾದ ವಿಚಾರಗಳನ್ನು ಅರಿತರೆ, ಕೀಟಪ್ರಪಂಚಕ್ಕೆ ನಾವು ಆಕ್ರಮಣ ಮಾಡುತ್ತಿದ್ದೇವೆ ಎಂದು ತಿಳಿಯುತ್ತದೆ.
- ಮೇಲೆ ಹೇಳಿದಂತೆ ಕೀಟಗಳಲ್ಲಿ ಬಹುಪಾಲು ಕೀಟಗಳು ಉಪಕಾರಿಗಳು.
- ವಿದೇಶಗಳಲ್ಲಿ ಕೀಟಗಳ ಸ್ಟಾಂಪ್, ಗ್ರೀಟಿಂಗ್ಸ್ ಹೀಗೆಲ್ಲಾ ಮಾಡಿ ಅವುಗಳ ಕೊಡುಗೆಗೆ ಕೃತಜ್ಞತೆ ಸಲ್ಲಿಸಲಾಗುತ್ತಿದೆ.
- ನಾವು ಇದನ್ನು ಮಾಡುತಿಲ್ಲ. ಬದಲಿಗೆ ಉಪಕಾರೀ ಉಪದ್ರವಕಾರೀ ಎರಡೂ ಬಗೆಯ ಕೀಟಗಳನ್ನು ಆಪೋಷಣ ತೆಗೆದುಕೊಳ್ಳುತ್ತಿದ್ದೇವೆ.
- ಕೀಟಗಳಲ್ಲಿ ಬೆಳೆ ಉತ್ಪಾದನೆಗೆ ( ಪರಾಗಸ್ಪರ್ಶ) ನೆರವಾಗುವವುಗಳ ಪ್ರಮಾಣ 80% ಕ್ಕೂ ಹೆಚ್ಚು ಇವೆ.
ಬೆಳೆಕು ಮತ್ತು ಕೀಟನಾಶ:
ಬೇರು ಜಂತು ಹುಳ ಒಂದನ್ನು ಬಿಟ್ಟು ಉಳಿದೆಲ್ಲಾ ಕೀಟಗಳು ಪತಂಗ, ದುಂಬಿ (Phylum Arthropods) ಆಗಿದ್ದಾದ ಬೆಳೆಕಿನ ಕಡೆಗೆ ಆಕರ್ಶಿತವಾಗುತ್ತವೆ.ಇವುಗಳಲ್ಲಿ ಕೆಲವೇ ಕೆಲವು ಮಾತ್ರ ಬೆಳೆಗಳಿಗೆ ಹಾನಿ ಮಾಡುವವುಗಳು.
- ಕೀಟ ನಿಯಂತ್ರಣಕ್ಕೆ ಬೆಳಕಿನ ಟ್ರಾಪುಗಳನ್ನು ಬಹಳ ಹಿಂದೆಯೇ ಪರಿಚಯಿಸಲಾಗಿತ್ತು.
- ಆದರೆ ಅದರ ಬಳಕೆ ನಿರೀಕ್ಷಿಯಷ್ಟು ಫಲಕಾರಿಯಾಗಿರಲಿಲ್ಲ. ಜೊತೆಗೆ ಇದರಿಂದ ಉಪಕಾರೀ ಕೀಟಗಳಿಗೆ ತೊಂದರೆ ಆಗುವುದನ್ನು ಮನಗಂಡು ಇಗ ಅದಕ್ಕೆ ಹೆಚ್ಚಿನ ಒತ್ತು ಕೊಡಲಾಗುತ್ತಿಲ್ಲ.
- ಆದ ಕಾರಣ ಇದರ ವ್ಯಾಪಕ ಬಳಕೆ ಆಗಿಲ್ಲ. ಆದರೆ ಇತ್ತೀಚೆಗೆ ಬೆಳೆಕಿನ ಟ್ರಾಪುಗಳನ್ನು ಸೌರ ಶಕ್ತಿ ಬೆಳಕಿನ ಮೂಲಕ ಪ್ರಚಾರಕ್ಕೆ ತರಲಾಗುತ್ತದೆ.
- ಹಲವಾರು ಸೌರ ಶಕ್ತಿ ಅಧಾರಿತ ಸೋಲಾರ್ ಇನ್ಸೆಕ್ಟ್ ಟ್ರಾಪುಗಳಿದ್ದು, ಇದರ ತಯಾರಿಕೆ ಮತ್ತು ಮಾರುಕಟ್ಟೆಯಲ್ಲಿ ಖಾಸಗಿಯವರು ಮುಂದೆ ಇದ್ದಾರೆ.
- ಸರಕಾರೀ ಸಂಶೋಧನಾ ಸಂಸ್ಥೆಗಳ ಕೀಟ ಶಾಸ್ತ್ರಜ್ಞರು ಇದನ್ನು ಹೆಚ್ಚಾಗಿ ಶಿಫಾರಸು ಮಾಡುತ್ತಿಲ್ಲ.
- ಆದರೆ ಖಾಸಗಿಯವರ ಮಾರಾಟ ಚಾಕಚಕ್ಯತೆ ಇದನ್ನು ಬಹಳಷ್ಟು ಪ್ರಚಾರಕ್ಕೆ ತಂದಿದೆ.
ಇದರಿಂದ ಅನುಕೂಲ ಇದೆಯೋ ಇಲ್ಲವೋ ಎಂಬುದನ್ನು ರೈತಾಪಿ ವರ್ಗ ಬರೇ ಕೀಟಗಳ ಸಾವನ್ನು ನೋಡಿ ಹೇಳುತ್ತಾರೆ. ಕರಾರುವಕ್ಕಾಗಿ ಇದರಲ್ಲಿ ಉಪಕಾರೀ ಕೀಟಗಳು ಎಷ್ಟು ಇರುತ್ತವೆ, ಎಷ್ಟು ಹಾನಿ ಕಾರಕ ಕೀಟಗಳು ಇರುತ್ತವೆ ಎಂಬುದನ್ನು ತಜ್ಞರು ಅಧ್ಯಯನ ಮಾಡಿ ಹೇಳಬೇಕಾಗಿದೆ.
ಇದು ತಪ್ಪು ಸಂದೇಶ ಅಲ್ಲ:
- ಈ ಬರಹ ಯಾವುದೇ ತಪ್ಪು ಸಂದೇಶದ ರವಾನೆ ಅಲ್ಲ.
- ಬದಲಾಗಿ ವಿಷಯ ತಜ್ಞರ ಗಮನ ಸೆಳೆದು ಸಂದೇಹ ನಿವಾರಣೆ ಮಾಡಿಕೊಡಲು ಒಂದು ಆಮಂತ್ರಣ ಅಷ್ಟೇ .
ಇದರಿಂದ ಪ್ರಯೋಜನ ಎಷ್ಟು – ಭವಿಷ್ಯದಲ್ಲಿ ಇದರ ಪರಿಣಾಮ ಎನು ಎಂಬುದನ್ನು ತಕ್ಷಣ ವಿಷಯ ತಜ್ಞರು ಅಧ್ಯಯನ ಮಾಡಿ ಸಾಮಾನ್ಯ ಜನತೆಗೆ ತಿಳಿ ಹೇಳಬೇಕಾಗಿದೆ. ಕೀಟಗಳ ವಿಷಯದಲ್ಲಿ ಕೀಟ ಶಾಸ್ತ್ರಜ್ಞರ ಅದ್ಯಯನ ಮತ್ತು ಜ್ಞಾನ ಅಘಾಧವಾಗಿದೆ.ಇಂದು ನಮ್ಮಲ್ಲಿ ಬಹಳಷ್ಟು ಪರಭಕ್ಷಕ ಕೀಟಗಳು ಅವನತಿಯಾಗುತ್ತಿವೆ. ಈ ನಿಟ್ಟಿನಲ್ಲಿ ಈ ಹೊಸ ಬೆಳೆಕಿನ ಟ್ರಾಪುಗಳ ಸಸ್ತ್ಯಾಸತ್ಯತೆಯನ್ನು ಅಧ್ಯಯನ ಮಾಡಿ ಜನತೆಗೆ ಮನವರಿಕೆ ಮಾಡಿಕೊಡಬೇಕಾದ ಅಗತ್ಯ ಇದೆ.
end of the article:—————————————————–
search words: solar Trpas and its use# insects and light# light traps# light and insect attraction# Phylum Arthropods # pest control# pest attraction# solar insect traps#