ಎಲ್ಲದಕ್ಕೂ ತಜ್ಞರನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆಯುವ ಬದಲು ನಾವೇ ಒಂದಷ್ಟು ತಜ್ಞತೆಯನ್ನು ಸಂಪಾದಿಸುವುದು ಉತ್ತಮ. ಈ ನಿಟ್ಟಿನಲ್ಲಿ ನಾವು ಬೆಳೆಗಳಿಗೆ ಬಳಕೆ ಮಾಡುವ ರಂಜಕ ಗೊಬ್ಬರ ಸಸ್ಯಗಳಿಗೆ ದೊರೆಯುತ್ತದೆಯೇ ಎಂದು ತಿಳಿಯುವ ಸರಳ ವಿಧಾನಗಳು ಇವೆ.
- ನಿಮ್ಮ ಹೊಲದ ದ್ವಿದಳ ಸಸ್ಯಗಳು, ಅಧಿಕ ಪ್ರಮಾಣದಲ್ಲಿ ಹುಲ್ಲು ಬೆಳೆಯುತ್ತದೆಯೋ ಅಲ್ಲಿ ರಂಜಕ ಅಂಶ ಇದೆ ಎಂದರ್ಥ.
- ಇದು ನಿಖರವಾದ ಲಕ್ಷಣ ಅಲ್ಲದಿದ್ದರೂ ಬಹುತೇಕ ಇದು ರಂಜಕದ ಲಭ್ಯತೆಯನ್ನು ಸೂಚಿಸುತ್ತದೆ.
- ರಂಜಕಾಂಶ ಎಂಬುದು ಫಲಾಪೇಕ್ಷೆ ಇದ್ದು ಬೆಳೆ ಬೆಳೆಯುವಾಗ ನಿರೀಕ್ಷಿತ ಪ್ರತಿಫಲಕ್ಕೆ ಅತೀ ಅಗತ್ಯ.
ಮಣ್ಣಿನಲ್ಲಿ ರಂಜಕ ಇರುವ ಲಕ್ಷಣ:
- ಹೊಲದಲ್ಲಿ ಉದ್ದು, ಹೆಸರು ಹಾಗೆಯೇ ಇನ್ನಿತರ ದ್ವಿದಳ ಸಸ್ಯಗಳ ಬೀಜವನ್ನು ಬಿತ್ತಿದರೆ ಅದು ಉತ್ತಮವಾಗಿ ಮೊಳೆತು ಸಸಿಯಾಗಿ ಬೆಳೆದರೆ ಅಂತಹ ಮಣ್ಣಿನಲ್ಲಿ ರಂಜಕ ಅಂಶ ಇದೆ ಎಂದರ್ಥ.
- ಈ ಸಸ್ಯ್ಗಗಳನ್ನು ಅಥವಾ ಹುಲ್ಲಿನ ಸಸ್ಯಗಳನ್ನು ಕಿತ್ತು ತೆಗೆದಾಗ ಅದರಲ್ಲಿ ಅಧಿಕ ಪ್ರಮಾಣದ ಬೇರುಗಳಿದ್ದರೆ ಅಂತಹ ಮಣ್ಣು ಸಹ ರಂಜಕ ಸಂಪನ್ನವಾಗಿರುತ್ತದೆ..
- ಹೊಲ – ತೋಟದಲ್ಲಿ ಬೆಳೆಯುವ ಬೆಳೆಯಲ್ಲಿ ಅದು ಏಕದಳ ಆಗಿದ್ದರೆ ಮೇಲ್ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೇರುಗಳು ಕಾಣ ಸಿಕ್ಕರೆ.
- ಇತರ ಸಸ್ಯಗಳಲ್ಲಿ ಬೇರಿನ ಹಬ್ಬುವಿಕೆ ಹೆಚ್ಚಾಗಿದ್ದರೆ ರಂಜಕದ ಅಂಶ ಇದೆ ಎಂದರ್ಥ.
- ರಂಜಕ ಅಂಶ ಚೆನ್ನಾಗಿದ್ದಾಗ ಬೇರು ಹೆಚ್ಚು ಇರುತ್ತದೆ. ಇಳುವರಿ ಹೆಚ್ಚು ಬರುತ್ತದೆ. ಬೇಗ ಬೆಳೆ ಪಕ್ವವಾಗುತ್ತದೆ.
- ಹೊಲದ ಮಣ್ಣಿನಲ್ಲಿ, ನೀರಿನಲ್ಲಿ ಹಾವಸೆ ಬೆಳೆಯುತ್ತಿದ್ದರೆ ಗಂಧಕ, ಸಾರಜನಕ, ಮತ್ತು ರಂಜಕಾಂಶ ಇದೆ ಎಂದರ್ಥ.
ರಂಜಕ ಹೆಚ್ಚಾಗಲು ಏನು ಮಾಡಬೇಕು:
- ರಂಜಕವು ಮಣ್ಣಿಗೆ ಹೆಚ್ಚಿನ ಪ್ರಮಾಣದಲ್ಲಿ ಸೇರಲು ಗೊಬ್ಬರ ರೂಪದಲ್ಲಿ ರಂಜಕ ಬಳಕೆ ಮಾಡುವುದು ಒಂದೆಡೆಯಾದರೆ ಹೊಲದಲ್ಲಿ ದ್ವಿದಳ ಜಾತಿಯ ಸಸ್ಯಗಳನ್ನು ಬೆಳೆಸುವುದು ಮತ್ತೊಂದು ವಿಧಾನ.
- ಅಧಿಕ ಮಳೆಯಾಗುವ ಸಮಯದಲ್ಲಿ ಮೇಲುಮಣ್ಣು ಅಥವಾ ತೋಟದ ಮೂಲಕ ಮಣ್ಣು ಮಿಶ್ರಿತ ನೀರು ಹೊರ ಹೋಗದಂತೆ ಮಾಡಿದರೆ ರಂಜಕದ ಅಂಶ ಉಳಿಯುತ್ತದೆ.
- ಮಣ್ಣಿನ ರಸಸಾರ ಸರಿ ಸುಮಾರು ಹತ್ತಿರ ಹತ್ತಿರ ತಟಸ್ಥವಾಗಿದ್ದರೆ (5.5-8.5) ಅಲ್ಲಿ ರಂಜಕಾಂಶ ಉಳಿಯುತ್ತದೆ.
- ಚಳಿಗಾಲದಲ್ಲಿ ಎಲೆಗಳು ಮತ್ತು ಸಸ್ಯ ಸ್ವಲ್ಪ ಜಗ್ಗಿದಂತೆ ( ಎಲೆ ಹಳದಿಯಾಗುವಿಕೆ, ಜೋತು ಬೀಳುವಿಕೆ) ಕಂಡು ಬಂದರೆ ಅಲ್ಲಿ ರಂಜಕಾಶದ ಕೊರತೆ ಇರುತ್ತದೆ.
ರಂಜಕ ಮೂಲದ ಗೊಬ್ಬರವನ್ನು ಸ್ವಲ್ಪ ಕೊಟ್ಟರೂ ಸಸ್ಯಗಳು ಅದಕ್ಕೆ ಸ್ವಂದಿಸಿದರೆ ಅಂತಹ ಮಣ್ಣು ರಂಜಕ ಸ್ವೀಕರಿಸುವ ಸ್ಥಿತಿಯಲ್ಲಿ ಇರುತ್ತದೆ.ಮಣ್ಣಿನಲ್ಲಿ ಹಾಕಿದ ಸಾವಯವ ವಸ್ತುಗಳು ಬೇಗ ಕಳಿಯುತ್ತದೆ ಎಂದಾದರೆ ಮಣ್ಣಿನಲ್ಲಿ ರಂಜಕದ ಅಂಶ ಇರುತ್ತದೆ.
- ಮಳೆ ಹೆಚ್ಚು ಬರುವ ಕಡೆ ನೀರು ಹರಿದು ಹೋಗುವ ಪ್ರದೇಶಗಳಲ್ಲಿ ರಂಜಕ ಕಡಿಮೆಯಾಗುತ್ತದೆ.
- ಮಣ್ಣು ಸವಕಳಿ ತಡೆದರೆ ರಂಜಕಾಂಶ ಉಳಿಯುತ್ತದೆ.
- ಮಣ್ಣು ಸಡಿಲ ಇದ್ದರೆ ಅಲ್ಲಿ ರಂಜಕಾಂಶ ಇರುತ್ತದೆ.
- ಜೌಗು ಜಾಗದಲ್ಲಿ ರಂಜಕದ ಕೊರತೆ ಇರುತ್ತದೆ.
- ಬಸಿಗಾಲುವೆ ಸಮರ್ಪಕವಾಗಿರುವಲ್ಲಿ ರಂಜಕಾಂಶ ಇರುತ್ತದೆ.
- ರಂಜಕ ಯಾವಾಗಲೂ ಇಳಿದು ಹೋಗಿ ನಷ್ಟವಾಗುವುದಿಲ್ಲ.
- ಅದನ್ನು ಸ್ವಲ್ಪ ಸ್ವಲ್ಪವೇ ಕೊಡುತ್ತಾ ಇದ್ದರೆ ಫಲಿತಾಂಶ ಉತ್ತಮವಾಗಿರುತ್ತದೆ.
- ಸುಣ್ಣವನ್ನು ಕೊಡುತ್ತಿದ್ದರೆ ರಂಜಕದ ಲಭ್ಯತೆ ಹೆಚ್ಚುತ್ತದೆ.
ರಂಜಕದ ಲಭ್ಯತೆ ಹೆಚ್ಚಾಗಲು ಮಣ್ಣಿಗೆ ಸಾಕಷ್ಟು ಸಾವಯವ ತ್ಯಾಜ್ಯಗಳನ್ನು ಒದಗಿಸುತ್ತಾ ಇರಬೇಕು. ಮಣ್ಣಿನ ರಸಸರಾವನ್ನು ಕಾಯ್ದುಕೊಳ್ಳಬೇಕು. ಆಗಾಗ ರಂಜಕಯುಕ್ತ ಗೊಬ್ಬರಗಳನ್ನು ಕೊಡುತ್ತಿರಬೇಕು.
ರಂಜಕ ಗೊಬ್ಬರ ಕಡಿಮೆ ಪ್ರಮಾಣದಲ್ಲಿ ಬೇಕಾಗುವಂತದ್ದಾದರೂ ಅದು ಸಸ್ಯಕ್ಕೆ ಅವಶ್ಯಕವಾಗಿ ಬೇಕು.ಇದರ ಸಮತೋಲನವನ್ನು ಪ್ರತೀಯೊಬ್ಬ ರೈತನೂ ಅರಿಯಬೇಕು.
end of the article:
search words: phosphorus in soil # soil phosphorus # phosphorus uptake #