ಪೊಟ್ಯಾಶಿಯಂ ಫೋಸ್ಫೋನೇಟ್- ಶಿಲೀಂದ್ರ ರೋಗಕ್ಕೆ ರಾಮಬಾಣ.

ಪೊಟ್ಯಾಶಿಯಂ ಫೋಸ್ಫೋನೇಟ್ ಅಥವಾ ಪೊಟಾಶಿಯಂ ಸಾಲ್ಟ್ ಆಫ್ ಫೋಸ್ಫೊರಸ್ ಅಸಿಡ್, ಅಥವಾ ಫೊಟ್ಯಾಶಿಯಂ ಸಾಲ್ಟ್ ಆಫ್ ಫೊಸ್ಫೋನಿಕ್ ಅಸಿಡ್   ಇದು ನೀರಿನಲ್ಲಿ ಕರಗುವ ಒಂದು ಅಂತರ್ ವ್ಯಾಪೀ ಶಿಲೀಂದ್ರ ನಾಶಕ.  ಇದು ನೋಡಲು ಬಿಳಿ ಹರಳು ರೂಪದಲ್ಲಿರುತ್ತದೆ.  ಇದರ ಪಿಎಚ್ ಮೌಲ್ಯ 5.29  ರಷ್ಟು ಇರುತ್ತದೆ. 


 

  • ಇದು ವಿಶ್ವದಾದ್ಯಂತ ಬಳಕೆಯಲ್ಲಿರುವ ಒಂದು ಪರಿಣಾಮಕಾರೀ ಅಂತರ್ ವ್ಯಾಪೀ ಶಿಲೀಂದ್ರ ನಾಶಕ.
  • ಅಡಿಕೆ, ದ್ರಾಕ್ಷಿ, ಕಾಳುಮೆಣಸು ಬೆಳೆಗಳ ಶಿಲೀಂದ್ರ ರೋಗಕ್ಕೆ ಇದು ಪರಿಣಾಮಕಾರೀ ಎಂದು ನಮ್ಮಲ್ಲೂ ಸಾಬೀತಾಗಿದೆ.

ಇದರ ಮೂಲದಲ್ಲೇ   ನಮಗೆ ಬೇರೆ ಬೇರೆ ತಯಾರಕರು ಬಯೋ ಹೆಸರಿನ ಕೊಳೆ ರೋಗ ನಿಯಂತ್ರಕವನ್ನು  ಸರಬರಾಜು ಮಾಡಿದ್ದಾರೆ. ಕೆಲವು ತಯಾರಕರು  ಅದನ್ನು ಮುದ್ರಿಸಿ ತಿಳಿಸಿದ್ದರೆ  ಬೇರೆಯವರು ಸಂಪೂರ್ಣ ಸಾವಯವ ಎಂದು ಹೇಳಿ ಜನರನ್ನು ನಂಬಿಸಿದ್ದಾರೆ.

ಇದು ರಾಸಾಯನಿಕವೇ:

  • ಇದು ಸಸ್ಯಗಳ ಶಿಲೀಂದ್ರ ರೋಗವನ್ನು ತಡೆಯುತ್ತದೆ.  ವಿದೇಶಗಳಲ್ಲಿ ಇದನ್ನು ತಯಾರಿಸುತ್ತಾರೆ.
  • ಚೀನಾ ಮತ್ತು ಇನ್ನಿತರ ದೇಶಗಳಿಂದ ಇದನ್ನು ಆಮದು ಮಾಡಿಕೊಂಡು ಅದನ್ನು ದ್ರವ ರೂಪಕ್ಕೆ ಪರಿವರ್ತಿಸಿ ಬಾಟಲಿಯಲ್ಲಿ ತುಂಬಿ ತಮ್ಮ ಹೆಸರಿನ ತಯಾರಿಕೆಯಾಗಿ  ಮಾರಾಟ ಮಾಡುತ್ತಾರೆ.
  •  ಇದು ಮೂಲತಹ  ಪುಡಿ ರೂಪದಲ್ಲಿ ದೊರೆಯುತ್ತದೆ.
  • ಇದರಲ್ಲಿ 99%  ಕ್ರಿಯಾಶೀಲ ಅಂಶ ಇದ್ದರೆ , ದ್ರವದಲ್ಲಿ 45-48%  ದಷ್ಟು ಇರುತ್ತದೆ.
  • ಇದರಲ್ಲಿ  ಗುಣಮಟ್ಟ ಬೇರೆ ಬೇರೆ ಇರಬಹುದು.

ಬಳಕೆ ಹೇಗೆ?

  • ಉತ್ತಮ ಗುಣಮಟ್ಟದ  ಸಾಮಾಗ್ರಿಯನ್ನು 1 ಲೀ. ನೀರಿಗೆ 2.5  ಗ್ರಾಂ ಪ್ರಕಾರ ಹಾಕಿ ಅಡಿಕೆ, ಕರಿಮೆಣಸು, ಅನನಾಸು ಬೆಳೆಗಳಿಗೆ ಸಿಂಪರಣೆ ಮಾಡಿದರೆ ಕೊಳೆಯುವ ರೋಗ ನಿಗದಿತ ಸಮಯದ ತನಕ ಬರಲಾರದು.
  • ಮಳೆಗಾಲಕ್ಕೆ ಮುಂಚೆ,  ಅಲ್ಪ ಸ್ವಲ್ಪ ಮಳೆ ಬಂದು ಮಣ್ಣು ತೇವವಾಗಿ  ಬೇರು ವ್ಯವಸ್ಥೆ ಚುರುಕಾಗಿರುವ ಸಮಯದಲ್ಲಿ ಇದನ್ನು ನೀರಿನಲ್ಲಿ 3-4 -5  ಗ್ರಾಂ ನಂತೆ  ಕರಗಿಸಿ ಒಂದು ಅಡಿಕೆ  ಮರದ ಬುಡಕ್ಕೆ  1 ಅಥವಾ 2 ಲೀ  ಡ್ರೆಂಚಿಂಗ್ ಮಾಡಬಹುದು.
  • ಇದೂ ಫಲಕಾರಿಯಾಗುತ್ತದೆ. ಯಾರೋ ಒಬ್ಬರು ಕೊಳೆ ರೋಗಕ್ಕೆ ಮಾತ್ರೆಯನ್ನು  ಮಾಡಿದ್ದು ಕೇಳಿದ್ದೇನೆ. ಅದೂ ಇದೇ ಹುಡಿಯನ್ನು ಬಳಸಿ ತಯಾರಿಸಿದ್ದಿರಬೇಕು.

ಇದು ಪ್ರತಿರೋಧಕ:

  • ಇದು ಒಂದು ರೋಗ ಪ್ರತಿರೋಧಕ ಎನ್ನಬಹುದು. ಸಸ್ಯಕ್ಕೆ  ರೋಗ ನಿರೋಧಕ ಶಕ್ತಿಯನ್ನು ಸ್ವಲ್ಪ ಸಮಯದ ತನಕ ಕೊಟ್ಟು ರೋಗ ಬಾರದಂತೆ ತಡೆಯುತ್ತದೆ.
  • ಆ ನಂತರ ಅದರ ಪ್ರಭಾವ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ 50-60  ದಿನಗಳ ತನಕ ಇದರ ಪ್ರಭಾವ ಇರುತ್ತದೆ.
  • ಇದರ ಜೊತೆಗೆ ಕಡಿಮೆ ಸಾಂದ್ರತೆಯಲ್ಲಿ  ನೀರಿನಲ್ಲಿ ಕರಗುವ ಗೊಬ್ಬರ ಕೊಡಬಹುದು.
  • ಕೀಟನಾಶಕ ಕೊಡಬಹುದು. ಆದರೆ ಕಾಪರ್ ಸಲ್ಫೇಟ್ ನಂತಹ ಸಲ್ಫರ್ ಅಂಶ ಉಳ್ಳ ತಯಾರಿಕೆಯೊಂದಿಗೆ, CO C  ಜೊತೆ ಮಿಶ್ರಣ ಮಾಡಬಾರದು.
  • ಇದು ವಿಷಕಾರಿಯಲ್ಲ. ಆದರೂ ಜಾಗರೂಕತೆಯಲ್ಲಿ ದಾಸ್ತಾನು ಇಡಬೇಕು ಮತ್ತು ಶರೀರಕ್ಕೆ  ಹೆಚ್ಚು ತಾಗಿಸಿಕೊಳ್ಳಬಾರದು.
  • ದ್ರಾಕ್ಷಿ ದಾಳಿಂಬೆ , ಬೆಳೆಯಲ್ಲಿ ಡೌನಿ ಮಿಲ್ಡಿವ್ ಪೌಡ್ರೀ ಮಿಲ್ದಿವ್,  ಲೀಫ್ ಬ್ಲೈಟ್  ಗಳಿಗೆ ಇದನ್ನು ಮೂಲವಸ್ತುವಾಗಿ ಬಳಸಿ ತಯಾರಿಸಲ್ಪಟ್ಟ  ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿದೆ.
  • ಅಡಿಕೆಯ ಕೊಳೆ ರೋಗದ ಬಗ್ಗೆ  ಇದನ್ನು ಪರಿಶೀಲಿಸಲಾಗಿ ಫೈಟೋಪ್ಥೆರಾ ಶಿಲೀಂದ್ರವನ್ನು  ಇದು ನಿಯಂತ್ರಿಸುತ್ತದೆ.
  • ಕೆಲವು ಬ್ಯಾಕ್ಟೀರಿಯಾ ಬ್ಲೈಟ್ ಗಳಿಗೂ ಇದು ಪರಿಣಾಮಕಾರಿ.
  • ಇದರ ಬಳಕೆಯಿಂದ ಬೇರು ಚುರುಕಾಗುತ್ತದೆ ಎನ್ನುತ್ತಾರೆ.
  • ರಂಜಕದ ಅಂಶ ಇರುವ ಕಾರಣ ಯಾವುದೇ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಹತ್ತಿಕ್ಕುತ್ತದೆಯಂತೆ.

ಇದನ್ನು ಬಳಕೆ ಮಾಡಿದಾಗ ಕೊಳೆ ರೋಗ ಬರುವುದಿಲ್ಲ ಎಂಬುದು ರೈತರ ಹೊಲದಲ್ಲಿ ಈ ಹಿಂದೆ ಬಳಕೆ ಮಾಡಿದಾಗ  ಗೊತ್ತಾಗಿದೆ.  ಈಗಲೂ ಹಲವಾರು ಜನ  ರೈತರು ಸಿಂಗಾರಕ್ಕೆ ಬೇಸಿಗೆಯಲ್ಲೂ ಮಳೆಗಾಲ ಪೂರ್ವದಲ್ಲಿ  ಕೊಳೆ ಪ್ರತಿಬಂಧಕವಾಗಿಯೂ ಬಳಸುತ್ತಿದ್ದಾರೆ.  ಇದರ ಪರಿಣಾಮ ಮನದಟ್ಟಾದವರು ಯಾವುದೇ ಭಿನ್ನಾಭಿಪ್ರಾಯ  ವ್ಯಕ್ತ ಪಡಿಸುವುದಿಲ್ಲ.  ಆದರೆ ರೋಗ ಬಂದದ್ದು ವಾಸಿಯಾಗುತ್ತದೆಯೇ ಎಂಬುದು ತಿಳಿಯಬೇಕಷ್ಟೇ.

ಇದು ಒಂದು ಉತ್ತೇಜಕ ( Stimulant). ಜೊತೆಗೆ ಶಿಲೀಂದ್ರ  ಸೋಂಕು ಆಗದಂತೆ ತಡೆಯುವ ರಕ್ಷಕ.. ಇದರ ಬಳಕೆ ಸುಲಭ. ಪರಿಣಾಮ ಉತ್ತಮ. ಖರ್ಚೂ ಕಡಿಮೆ.  ಬಹುತೇಕ ಕೀಟನಾಶಾ ಪೊಷಕಾಂಶಗಳೂ ಇದರ ಜೊತೆಗೆ ಹೊಂದಾಣಿಕೆಯಾಗುತ್ತದೆ.  

 

2 thoughts on “ಪೊಟ್ಯಾಶಿಯಂ ಫೋಸ್ಫೋನೇಟ್- ಶಿಲೀಂದ್ರ ರೋಗಕ್ಕೆ ರಾಮಬಾಣ.

    1. ನಿಮ್ಮ ಊರು ಯಾವುದು. ಆಕ್ಕೊಮಿನ್ ಎಂಬ ತಯಾರಿಕೆ, ಬಯೋ ಫೈಟ್, ಸುರಕ್ಷಾ ಮುಂತಾದ ಹೆಸರಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಇವೆ. ಅಥವಾ ಕೆಲವರು ಹುಡಿ ರೂಪದಲ್ಲಿ ಕೊಡುತ್ತಾರೆ.

Leave a Reply

Your email address will not be published. Required fields are marked *

error: Content is protected !!