ಹಲಸು- ಇವರಲ್ಲಿ ಇಲ್ಲದ್ದು ಬೇರೆ ಎಲ್ಲೂ ಇಲ್ಲ.

Jack Anil grafting specialist

ಹಲಸಿನ ತಳಿಯ ಎಲೆಯನ್ನು ನೋಡಿ ಇದ್ದು ಇಂತದ್ದೇ ಹಲಸು, ಅದೇ ರೀತಿ ಯಾವುದೇ ಹಣ್ಣಿನ ಗಿಡದ ಎಲೆ ನೊಡಿಯೇ ಇದು ಇಂತದ್ದು ಎಂದು ಹೇಳುವವರು.  ಇದರ ಕಾಯಿ ಹೀಗೆಯೇ ಇರುತ್ತದೆ ಎಂದು ಹೇಳಬಲ್ಲರು. ಇದೆಲ್ಲಾ  ಅನುಭವ.  ಕೇರಳದಿಂದ ಬಂದ ಜಾಕ್ ಅನಿಲ್ ಈಗ ಹಲಸಿನ ಸಸ್ಯಾಭಿವೃದ್ದಿ ವಿಷಯದಲ್ಲಿ  ಬಹಳ ಪ್ರಸಿದ್ದಿ.

Jack Anil

  • ಕೇರಳದ ಜನ ಎಲ್ಲೇ ಹೋಗಲಿ ಗೆದ್ದು ಬರುತ್ತಾರೆ,ಅದಕ್ಕೆ ಖುಷಿ ಪಡಬೇಕು.
  • ಕೇರಳದ ಜನ ಇಲ್ಲಿಗೆ ಬಂದು ನಮಗೆ ಶುಂಠಿ ಬೆಳೆಸಲು ಹೇಳಿ ಕೊಟ್ಟರು.
  • ಹಾಗೆಯೇ ರಬ್ಬರ್ ಬೆಳೆಯಲು ಹೇಳಿಕೊಟ್ಟರು. ಅನಾನಾಸು ಬೆಳೆ, ವಿದೇಶೀ ಹಣ್ಣು ಹಂಪಲು, ಸಾಂಬಾರ ಬೆಳೆಯ ವಿಚಾರದಲ್ಲೂ ಇವರದ್ದೇ ಮೇಲು ಗೈ. ತಾವು ಸಾಧನೆ ಮಾಡಿ ತೋರಿಸಿ ಇತರರಿಗೆ ಪ್ರೇರಣೆಯಾಗುತ್ತಾರೆ.
  • ಬೆಳಗ್ಗೆಯಿಂದ ಸಂಜೆ ತನಕ ಹೊಲದಲ್ಲಿ ದುಡಿಯುವ ಇವರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಎಲ್ಲರೂ ಗುರುತಿಸುವ ಕೆಲಸ ಮಾಡಿ ತೋರಿಸುತ್ತಾರೆ.

ಏನಿದೆ ಇವರಲ್ಲಿ:

  • ವರ್ಷಕ್ಕೆ ಸುಮಾರು 10 ಸಾವಿರಕ್ಕೂ ಮಿಕ್ಕಿ ಹಲಸಿನ ಸಸಿಗಳನ್ನು ಮಾಡುತ್ತಾರೆ.
  • ಅದು ಒಂದೆರಡು ತಳಿಯಲ್ಲ. ಸುಮಾರು 20 ಕ್ಕೂ ಹೆಚ್ಚು ಬಗೆಯ ಉತ್ಕೃಷ್ಟ ತಳಿಗಳನ್ನು .
  • ಕಣ್ಣು ಕಸಿ ವಿಧಾನದಲ್ಲಿ ಸಸ್ಯಾಭಿವೃದ್ದಿ ಮಾಡುತ್ತಾರೆ.
  • ನಿನ್ನಿಕಲ್ ನರ್ಸರಿ ಎಂಬ ಹೆಸರಿನ ಈ ಸಸ್ಯೋತ್ಪಾದನಾ ಕೇಂದ್ರ ಪುತ್ತೂರಿನಿಂದ ವಿಟ್ಲಕ್ಕೆ ಹೋಗುವ ದಾರಿಯಲ್ಲಿ  ಕಬಕದಿಂದ 3  ಕಿಲೊಮೀಟರು ದೂರಕ್ಕೆ ಎಡ ಬದಿಗೆ ಸಿಗುತ್ತದೆ.

ಎಲ್ಲಿಂದ ಬಂದವರು.

  • ಸುಮಾರು 17 ವರ್ಷಕ್ಕೆ ಹಿಂದೆ ಕೇರಳದ ತಿರುವನಂತಪುರದಿಂದ ಈ ಊರಿಗೆ  ಬರೇ ನರ್ಸರಿ ಮಾಡುವ ಉದ್ದೇಶಕ್ಕಾಗಿಯೇ ಬಂದರು.
  • ಅಂದಿನಿಂದ ಇಂದಿನ ತನಕವೂ ಹಲಸಿನ ಸಸ್ಯಾಭಿವೃದ್ದಿಯಲ್ಲಿ ತೊಡಗಿಸಿಕೊಂಡವರು.
  • ಪ್ರಾರಂಭದಲ್ಲಿ ಇಷ್ಟು ದೊಡ್ದ ಪ್ರಮಾಣದಲ್ಲಿ  ಹಲಸಿನ ಸಸ್ಯೋತ್ಪಾದನೆ ಇರಲಿಲ್ಲ.
  • ಮೊದಲು ಹಣ್ಣು ಹಂಪಲು ಸಸ್ಯೋತ್ಪಾದನೆ ಮಾಡುತ್ತಿದ್ದರು.
  • ಕ್ರಮೇಣ ಹಲಸಿಗೆ ಭಾರೀ ಮಹತ್ವ ಬರಲಾರಂಭಿಸಿತು.
  • ಆ ನಂತರ ಹಲಸಿನ ಸಸ್ಯೋತ್ಪಾದನೆಯನ್ನೇ ದೊಡ್ದ ಪ್ರಮಾಣದಲ್ಲಿ ಮಾಡುತ್ತಾ ಬಂದರು.
  • ಈಗ ಹಲಸಿನ ಜೊತೆಗೆ ಬೇರೆ ಬೇರೆ ಸಸಿಗಳನ್ನೂ ತಯಾರಿಸಿ, ತರಿಸಿ ಮಾರಾಟ ಮಾಡುತ್ತಾರೆ.

ತಜ್ಞರಾದುದು ಹೇಗೆ:

Big plants his speciality

  • ಹಲವಾರು ವರ್ಷಗಳಿಂದ ಹಲಸಿನ ಜೊತೆಯಲ್ಲಿ ಸಸ್ಯಾಭಿವೃದ್ದಿ, ತಳಿ ಸಂಗ್ರಹಣೆ ಮಾಡುತ್ತಾ ಬಂದ ಅನುಭವ ಈಗ ಅವರನ್ನು ಹಲಸಿನ ವಿಷಯದಲ್ಲಿ ಒಬ್ಬ ತಜ್ಞನನ್ನಾಗಿಸಿದೆ,
  • ಇವರಲ್ಲಿ ಇರುವ ಹಲಸಿಗೆ ಯಾವುದಕ್ಕೂ  ಇದು ಇಂತಹ ತಳಿ ಎಂಬ ಟ್ಯಾಗ್ ಇಲ್ಲ.
  • ಈ ಟ್ಯಾಗ್ ಬೇಕಾಗಿಲ್ಲ. ನಾನು ಎಲೆ ನೊಡಿಯೇ ಇದು ಇಂಥಹ ತಳಿಯದ್ದೆಂದು ಗುರುತಿಸಬಲ್ಲೆ ಎನ್ನುತ್ತಾರೆ.
  • ಇವರು ಹಲಸಿನ ಯಾವ ಗೆಲ್ಲಿನ ಕಣ್ಣು ತೆಗೆದರೆ ಅದರ ಮರದ ಆಕಾರ ಹೇಗಿರುತ್ತದೆ ಎಂಬುದನ್ನು ಹೇಳಬಲ್ಲರು.
  • ಸಣ್ಣ ತುದಿ ಗೆಲ್ಲಿನಿಂದ ತೆಗೆದರೆ ಅದರ ಸಸಿ ಕುಬ್ಜವಾಗಿರುತ್ತದೆ, ಕಾಂಡದಿಂದ ತೆಗೆದರೆ ಮರ ಸ್ವಲ್ಪ ಎತ್ತರವಾಗಿ ಬೆಳೆಯುತ್ತದೆ.
  • ಮರದ ಎಲೆ ನೋಡಿ ಇದರ ಹಣ್ಣಿನ ಆಕಾರ ಹೀಗೆ ಎಂದು ಹೇಳಲು  ಸಾಧ್ಯ, ಹೀಗೇ ಹಲವಾರು ವಿಚಾರಗಳು ಇವರ ಅನುಭವದ ಮಾಹಿತಿಗಳು.

ತಳಿ ಸಂಗ್ರಹ:

Budded plants

  • ಇವರದ್ದು ಪೂರ್ತಿ ಕಣ್ಣು ಕಸಿಯ ಸಸಿಗಳು. ತಾವೇ ಕಣ್ಣು ಕಸಿ ಮಾಡುತ್ತಾರೆ.
  • ಗಿಡ ತಯಾರಾದ ಎರಡು ವರ್ಷಗಳ ನಂತರ ಅಂದರೆ ಗಿಡ ಸುಮಾರು ಎರಡರಿಂದ ಮೂರು ಅಡಿ ಬೆಳೆದ ತರುವಾಯ ಅದನ್ನು  ಮಾರಾಟ ಮಾಡುತ್ತಾರೆ.
  • ಇವರಲ್ಲಿ ಸುಮಾರು 25 ಕ್ಕೂ ಹೆಚ್ಚು ಬಗೆಯ ಹಲಸಿನ ತಳಿಗಳಿದ್ದು, ಅವುಗಳ ಕೆಲವು ಹೆಸರು ಇಂತಿವೆ.

ಕೆಂಪು ತಳಿಯಲ್ಲಿ ಜೆ.ಪಿ- 3, ಸಿಂಗಪುರ್, ಭೈರಚಂದ್ರ, ಸಿಂಧೂರ, ಫಟ್ಟಮುಟ್ಟಂ, ತೂಬುಗೆರೆ, ರಾಮಚಂದ್ರ ಡ್ವಾರ್ಫ್ ,ಹಳದಿ ತಳಿಗಳಲ್ಲಿ, ಪ್ರಶಾಂತಿ, ಮಲೇಶಿಯನ್ ದ್ವಾರ್ಫ್ ( ಬೇಗ ಇಳುವರಿ ಕೊಡಬಲ್ಲ ತಳಿ), ಜೆ-33, ವಿಯೆಟ್ನಾಂ ಅರ್ಲಿ, ಸೋಜಾ ಡ್ವಾರ್ಫ್, ಸಿದ್ದು, ಜೆ ಪಿ -1, ರಾಜ ರುದ್ರಾಕ್ಷಿ , ಕರಿ ಬರಿಕ್ಕೆ, ಜೇನು ಬಕ್ಕೆ,  ಹೀಗೆ ಹಲವಾರು ಹೊಸ ಹೊಸ ತಳಿಗಳು ಇವರ ಸಂಗ್ರಹದಲ್ಲಿವೆ  ದಿನದಿಂದ ದಿನಕ್ಕೆ  ತಳಿ ಸಂಗ್ರಹ  ಹೆಚ್ಚಳವಾಗುತ್ತಾ ಇದೆ. ಯಾವುದೇ ಹಲಸಿನ ತಳಿ ಕೇಳಿದರೂ ಇಲ್ಲ ಎಂಬಂತಿಲ್ಲ ಈ ನರ್ಸರಿಯಲ್ಲಿ.

  • ಗಿಡ ಕೊಟ್ಟ ಮೇಲೆ ಅದಕ್ಕೆ ನಾವು ಬೆಲೆ ಪಡೆಯುತ್ತೇವೆ. ಅದು ಸಾಯಬಾರದು.
  • ಅದಕ್ಕಾಗಿ ಸರಿಯಾಗಿ ಬೆಳವಣಿಗೆ ಆದ ಸಸಿಗಳನ್ನು ಮಾತ್ರವೇ ಕೊಡುತ್ತೇವೆ.
  • ಇಲ್ಲಿ ಮಾರಲ್ಪಡುವ  ಸಸಿ ಕನಿಷ್ಟ 1 ವರ್ಷ ಹೆಚ್ಚಿನದು  2 ವರ್ಷ ತನಕ ಆದದ್ದು ಇರುವ ಕಾರಣ ಯಾವ ಗಿಡವೂ ಸಾಯದು.

ಸಂತೃಪ್ತ ಗ್ರಾಹಕರು ಮತ್ತೆ ಮತ್ತೆ ಬರುತ್ತಾರೆ. ಈಗಾಗಾಲೇ ಹಲವಾರು ಕಡೆ ಇವರು ಕೊಟ್ಟ ಸಸಿ ಫಲ ಬಿಡುತ್ತಿವೆ. ಕೇರಳ ಸರಕಾರ ಇವರ ಸಾಧನೆಯನ್ನು ಪುರಸ್ಕರಿಸಿದ್ದೂ ಇದೆ. ಆಗಾಗ ಹಲಸಿನ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳಲ್ಲಿ  ತಜ್ಞರಾಗಿ ಭಾಗವಹಿಸುತ್ತಾರೆ.

 ಸಂಪರ್ಕಕ್ಕಾಗಿ : 94487 78497

Leave a Reply

Your email address will not be published. Required fields are marked *

error: Content is protected !!