ಈ ವರ್ಷದ ನಿರೀಕ್ಷೆಯಂತೆ ಕೆಂಪಡಿಕೆ ದರಕ್ಕೆ ಅಂಜಿಕೆ ಇಲ್ಲ. ಇದು ಏರಿಕೆಯಾಗುವುದು ತಡವಾದರೂ ಇಳಿಕೆ ಆಗುವ ಸಾಧ್ಯತೆ ತುಂಬಾ ಕಡಿಮೆ. ಚಾಲಿ ಮಾತ್ರ ಈ ವರ್ಷ ಭಾರೀ ಏರಿಕೆಯ ನಿರೀಕ್ಷೆ ಇಲ್ಲ. ಹಾಗೆಂದು ಬಾರೀ ಇಳಿಕೆಯೂ ಆಗದು. ಇಂದು ದಿನಾಂಕ 22-02-2022 ಮಂಗಳವಾರ ರಾಜ್ಯದ ವಿವಿಧ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಅಡಿಕೆ, ಕರಿಮೆಣಸು, ಕೊಬ್ಬರಿ, ರಬ್ಬರ್, ಕಾಫೀ ದರ ಹೇಗಿತ್ತು ಗಮನಿಸಿ.
ಚಾಲಿ ದರ ಖಾಸಗಿಯವರ ಸ್ಪರ್ಧೆ ಇಲ್ಲದೆ ಅಲ್ಲಾಡುತ್ತಿಲ್ಲ. ಹಾಗೆಂದು ಕರಾವಳಿಯಲ್ಲಿ ಅಡಿಕೆ ಬೆಳೆಗಾರರು ಅಡಿಕೆ ಮಾರಾಟಕ್ಕೆ ತಯಾರಿಲ್ಲ. ಅಂತಹ ಹಣಕಾಸಿನ ತುರ್ತು ಸಹ ಇಲ್ಲದ ಕಾರಣ ಸ್ವಲ್ಪ ಸಮಯ ಕಾಯೋಣ, ದರ ಬಂದೇ ಬರುತ್ತದೆ ಎಂದು ಕಾಯುತ್ತಿದ್ದಾರೆ.ಒಂದಷ್ಟು ಜನ ಬೆಳೆಗಾರರು ಹಳೆ ಅಡಿಕೆ ಇಟ್ಟುಕೊಂಡು ಇನ್ನೂ ದರ ಏರಿಕೆ ಆಗಬಹುದು ಎಂದು ನಿರೀಕ್ಷೆಯಲಿದ್ದಾರೆ. ಈಗ ಅಡಿಕೆ ಮಾರುಕಟ್ಟೆಗೆ ಬರುವ ಸಮಯ ಎಂಬ ಕಾರಣಕ್ಕೆ ದರ ಇಳಿಕೆ ಆಗಿದೆ ಎನ್ನುತ್ತಾರೆ. ಆದರೆ ಈಗಿನ ಕಾಲ ಸ್ಥಿತಿಯಲ್ಲಿ ಕೊಯಿಲು ಆದ ತಕ್ಷಣ ಮಾರುಕಟ್ಟೆಗೆ ಹಿಂದಿನಂತೆ ಅಡಿಕೆ ಬರುವುದಿಲ್ಲ. ಬಹುತೇಕ ರೈತರು ಸ್ವಲ್ಪ ಸಮಯ ಕಾದು ಮಾರಾಟ ಮಾಡುವ ಬುಧ್ಹಿವಂತರಾಗಿದ್ದಾರೆ. ಹಾಗಾಗಿ ದರ ಸ್ವಲ್ಪ ಇಳಿಕೆ ಆದರೂ ಮತ್ತೆ ಚೇತರಿಸಿಕೊಳ್ಳಲಿದೆ. ಸಧ್ಯಕ್ಕೆ ಆಮದು ಆಗುವ ಸಾಧ್ಯತೆ ಇಲ್ಲ ಎಂಬ ಸುದ್ದಿಗಳಿವೆ.
ಕೆಂಪಡಿಕೆಗೆ ಅಂಜಿಕೆ ಇಲ್ಲ:
ಕೆಂಪಡಿಕೆ ಮಾರುಕಟ್ಟೆಯಲ್ಲಿ ಏನಾದರೂ ಸಂಚಲನ ಆಗುವುದಿದ್ದರೆ , ಈ ಸಮಯದಲ್ಲಿ ಆಗಲೇ ಬೇಕಿತ್ತು. ಒಂದೆಡೆ ಪಂಚ ರಾಜ್ಯ ಚುನಾವಣೆ, ವಿವಿಧ ಮಾರುಕಟ್ಟೆಯಲ್ಲಿ ದಿನಕ್ಕೆ 10000 ಚೀಲಗಳಷ್ಟು ಅಡಿಕೆ ಬರುವಾಗ ಸ್ವಲ್ಪ ದರ ಇಳಿಕೆ ಆಗಬೇಕಿತ್ತು. ಆದರೆ ಆಗಿಲ್ಲ. ಆದುದರಿಮ್ದ ಈಗ ಇರುವ ದರ ಕನಿಷ್ಟ ದರ ಎಂದೇ ಹೇಳಬಹುದು. ಎಲ್ಲಾ ಕಡೆಯಲ್ಲೂ ಕೊಯಿಲು ಮುಗಿದು, ಎಲ್ಲಾ ಪರಿಸ್ಥಿತಿ ಸುಗಮವಾಗಿ ಎಪ್ರೀಲ್ ಮೇ ತಿಂಗಳಿಗೆ ಕೆಂಪಡಿಕೆ ಧಾರಣೆ ಬಹುಷಃ ಭಾರೀ ಮೇಲೆ ಹೋಗಬಹುದು. ಇಂದು ಶಿವಮೊಗ್ಗ ಮಾರುಕಟ್ಟೆಯಲ್ಲಿ 4700 ಚೀಲ ಅಡಿಕೆ ಮಾರಾಟವಾಗಿದ್ದು, ಗರಿಷ್ಟ ದರ 46,000- ಸರಾಸರಿ ದರ 45,500 ಇತ್ತು. ಇದೇ ಕೆಂಪಡಿಕೆಯ ಬೇಡಿಕೆಯನ್ನು ತಿಳಿಸುತ್ತದೆ. ಬಾನುವಾರ ದಿನ ತೀರ್ಥಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ದಾಖಲೆಯ 3152 ಚೀಲ ಅಡಿಕೆ ಮಾರಾಟವಾಗಿದ್ದು, ಬೆಲೆ ಕಥೆ ಕೇಳಿದರೆ ಆಚ್ಚರಿಯಾಗಬಹುದು. ಗರಿಷ್ಟ ದರ 46299 ಸರಾಸರಿ ದರ 46000 ಇತ್ತು. ಹಾಗಾಗಿ ಬೆಲೆ ಇಳಿಕೆಯ ಸಾಧ್ಯತೆ ಇಲ್ಲ ಎಂದೇ ಹೇಳಬಹುದು.
ಚಾಲಿ ಅಡಿಕೆ ಮಾರುಕಟ್ಟೆ: ಕನಿಷ್ಟ- ಗರಿಷ್ಟ- ಸರಾಸರಿ
- ಬಂಟ್ವಾಳ: ಕೋಕಾ, 12500, 25000, 22500
- ಬಂಟ್ವಾಳ: ಹೊಸತು, 27500, 45000, 42000
- ಬಂಟ್ವಾಳ: ಹಳೆಯದು, 46000, 53000, 50000
- ಬೆಳ್ತಂಗಡಿ: ಕೋಕಾ 25000, 27000, 26500
- ಬೆಳ್ತಂಗಡಿ: ಹೊಸತು, 29500, 43000, 30000
- ಬೆಳ್ತಂಗಡಿ: ಹಳತು 40560, 52500, 50000
- ಕಾರ್ಕಳ: ಹೊಸತು 40000, 45000, 43000
- ಕಾರ್ಕಳ: ಹಳೆಯದು, 46000, 53000, 50000
- ಕುಂದಾಪುರ: ಹಳೆಯದು, 51500, 52500, 52000
- ಕುಂದಾಪುರ: ಹೊಸತು, 43500, 44500, 44000
- ಮಂಗಳೂರು: ಕೋಕಾ, 25500, 50200, 34000
- ಪುತ್ತೂರು: ಕೋಕಾ, 11000, 26000, 18500
- ಪುತ್ತೂರು: ಹೊಸತು, 27500, 45000, 36250
- ಸುಳ್ಯ: ಹೊಸತು, 27500, 45000, 38000
- ಸುಳ್ಯ: ಹಳೆಯದು, 46000, 53000, 47400.
- ಪಟೋರಾ: ಹೊಸತು:30000-32500 ಹಳೆಯದು:35,000-43500
- ಉಳ್ಳಿಗಡ್ಡೆ: ಹೊಸತು 20000-22500 ಹಳೆಯದು 23000-25600
- ಕರಿಕೋಕಾ:ಹೊಸತು 24,000-25,000 ಹಳೆಯದು 25,000-26,000
ಕೆಂಪಡಿಕೆ ಮಾರುಕಟ್ಟೆ:
- ಚಿತ್ರದುರ್ಗ: ಕೆಂಪುಗೋಟು, 30909, 31310, 31100
- ಚಿತ್ರದುರ್ಗ: ರಾಸಿ, 45139, 45569, 45379
- ದಾವಣಗೆರೆ: ರಾಸಿ, 40460, 46033, 44820
- ಹೊನ್ನಾಳಿ; ರಾಶಿ: 46200, 46200, 46200
- ಕುಮಟಾ ಚಿಪ್ಪು, 25019, 29019, 28579
- ಕುಮಟಾ ಕೋಕಾ, 16509, 27019, 26719
- ಕುಮಟಾ ಫ್ಯಾಕ್ಟರಿ, 13509, 19869, 19289
- ಕುಮಟಾ ಹೊಸ ಚಾಲಿ, 39089, 41009, 40769
- ಕುಮ್ಟಾ ಹಳೆಚಾಲಿ, 46019, 47599, 47089
- ಸಾಗರ ಬಿಳೇ ಗೋಟು, 24899, 27929, 25599
- ಸಾಗರ ಚಾಲಿ, 32099, 37299, 36899
- ಸಾಗರ ಕೋಕಾ, 26969, 28799, 27899
- ಸಾಗರ ಕೆಂಪುಗೋಟು 27899, 37689, 34692
- ಸಾಗರ ರಾಶಿ, 41606, 46999, 45499
- ಸಿಪ್ಪೆಗೋಟು: 5390, 20009, 17692
- ಸಾಗರ ಸಿಪ್ಪೆಗೋಟು:58, 17389, 17389, 17389
- ಶಿವಮೊಗ್ಗ ಬೆಟ್ಟೆ , 46189, 52199, 49690
- ಶಿವಮೊಗ್ಗ ಗೊರಬಲು, 17019, 34219, 33100
- ಶಿವಮೊಗ್ಗ ರಾಸಿ, 43649, 46000, 45500
- ಶಿವಮೊಗ್ಗ ಸರಕು, 53109, 75200, 69200
- ಸಿದ್ದಾಪುರ ಬಿಳೇಗೋಟು, 22899, 32399, 27899
- ಸಿದ್ದಾಪುರ ಚಾಲಿ, 43711, 45999, 43711
- ಸಿದ್ದಾಪುರ ಕೋಕಾ, 20871, 28599, 26099
- ಸಿದ್ದಾಪುರ ಹೊಸ ಚಾಲಿ, 33769, 39399, 38699
- ಸಿದ್ದಾಪುರ ಕೆಂಪುಗೋಟು, 28809, 32789, 32469
- ಸಿದ್ದಾಪುರ ರಾಸಿ, 43379, 46809, 45959
- ಸಿದ್ದಾಪುರ ತಟ್ಟೆ ಬೆಟ್ಟ್ತೆ, 37689, 43869, 39989
- ಸಿರ್ಸಿ ಬೆಟ್ಟೆ, 26719, 44399, 40609
- ಸಿರ್ಸಿ ಬಿಳೇ ಗೋಟು, 21919, 34099, 28668
- ಸಿರ್ಸಿ ಚಾಲಿ, 32160, 42461, 40250
- ಸಿರ್ಸಿ ರಾಶಿ, 36009, 46989, 45650
- ತೀರ್ಥಹಳ್ಳಿ ಬೆಟ್ಟೆ, 20/2/22: 44166, 51419, 49590
- ತೀರ್ಥಹಳ್ಳಿ ಇಡಿ, 34199, 45921, 45399
- ತೀರ್ಥಹಳ್ಳಿ ಗೊರಬಲು, 23368, 33899, 33099
- ತೀರ್ಥಹಳ್ಳಿ ರಾಸಿ, 32009, 46299, 46019
- ತೀರ್ಥಹಳ್ಳಿ ಸರಕು, 51509, 76208, 69099
- ತುಮಕೂರು ರಾಸಿ, 45400, 46300, 45700
- ಯಲ್ಲಾಪುರ ಅಪಿ, 53170, 54629, 53699
- ಯಲ್ಲಾಪುರ ಬಿಳೇ ಗೋಟು 26899, 32009, 30269
- ಯಲ್ಲಾಪುರ ಕೋಕಾ, 19022, 30212, 26899
- ಯಲ್ಲಾಪುರ ಹಳೇ ಚಾಲಿ, 44000, 47409, 46509
- ಯಲ್ಲಾಪುರ ಹೊಸ ಚಾಲಿ, 34506, 41800, 40120
- ಯಲ್ಲಾಪುರ ಕೆಂಪು ಗೋಟು, 28919, 36399, 32691
- ಯಲ್ಲಾಪುರ ರಾಸಿ, 45799, 52039, 49639
- ಯಲ್ಲಾಪುರ ತಟ್ಟೆ ಬೆಟ್ಟೆ, 38199, 45380, 42899
ಕರಿಮೆಣಸು ಧಾರಣೆ:
ಕರಿಮೆಣಸಿನ ದರ ಸ್ವಲ್ಪ ಇಳಿಕೆಯಾಗಿದೆ. ಇದಕ್ಕೆ ಕಾರಣ ರಶ್ಯಾ ಮತ್ತು ಉಕ್ರೇನ್ ಸಂಘರ್ಷ ಎನ್ನಲಾಗುತ್ತಿದೆ. ಒಟ್ಟಾರೆಯಾಗಿ ಯುದ್ದದ ವಾತಾವರಣ ಎಂದಾಕ್ಷಣ ಮಾರುಕಟ್ಟೆ ಸ್ವಲ್ಪ ಅಲ್ಲೋಲಕಲ್ಲೋಲವಾಗುವ ಸಾಧ್ಯತೆ ಇದ್ದೇ ಇರುತ್ತದೆ. ಅಲ್ಲಿ ಮೆಣಸಿಗೂ ರಶ್ಯಾಕ್ಕೂ ಉಕ್ರೇನಿಗೂ ಏನು ಸಂಬಂಧ ಎಂಬುದು ಮುಖ್ಯವಲ್ಲ. ಯುದ್ದದ ಸ್ಥಿತಿ ಉಂಟಾಗಬಹುದು. ಆದರೆ ಯುದ್ದ ನಡೆಯುವ ಸಾಧ್ಯತೆ ಕಡಿಮೆ. ಅಲ್ಲಿ ತನಕ ಮೆಣಸು ಹಾಗೆಯೇ ಅಡಿಕೆಗೂ ಸ್ವಲ್ಪ ಪೆಟ್ಟು ಬೀಳುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಯಾವ ದರ ಇತ್ತು? ಕಿಲೊ>
- ಸಕಲೇಶಪುರ: Royal Traders, ಅಯದ್ದು 500.00
- ಸಕಲೇಶಪುರ :Gain Coffee ಅಯದ್ದು , 510.00
- ಸಕಲೇಶಪುರ :Sathya Murthy, ಅಯ್ದದ್ದು, 530.00
- ಸಕಲೇಶಪುರ :Sathya Murthy, ಆಯದ್ದು 500.00
- ಸಕಲೇಶಪುರ :S.K Traders, ಆಯದ್ದು, 515.00
- ಸಕಲೇಶಪುರ :H.K.G & Bros-ಆಯದ್ದು, 500.00
- ಸಕಲೇಶಪುರ :Nasir Traders ಆಯದ್ದು, 500.00
- ಸಕಲೇಶಪುರ -Sainath Cardamom, ಹೊಸತು. 520.00
- ಬಾಳುಪೇಟೆ :Geetha Coffee Trading, ಆಯದ್ದು 520.00
- ಬಾಳುಪೇಟೆ:Coffee Age-ಆಯದ್ದು, 510.00
- ಮೂಡಿಗೆರೆ :Sha.M.Khimraj, ಆಯದ್ದು, 522.00
- ಮೂಡಿಗೆರೆ :Bhavarlal Jain, ಆಯದ್ದು, 520.00
- ಮೂಡಿಗೆರೆ :A1 Traders, ಆಯದ್ದು 520.00
- ಮೂಡಿಗೆರೆ :Harshika Traders-ಆಯದ್ದು, 520.00
- ಮೂಡಿಗೆರೆ :A.M Traders-ಆಯದ್ದು, 515.00
- ಮೂಡಿಗೆರೆ :Hadhi Coffee, ಆಯದ್ದು, 515.00
- ಚಿಕ್ಕಮಗಳೂರು:Arihant Coffee, ಆಯದ್ದು, 522.00
- ಚಿಕ್ಕಮಗಳೂರು:Nirmal Commodities, ಆಯದ್ದು, 510.00
- ಚಿಕ್ಕಮಗಳೂರು:M.R Stancy G.C, ಆಯದ್ದು, 520.00
- ಚಿಕ್ಕಮಗಳೂರು:Kiran, ಆಯದ್ದು, 505.00
- ಮಡಿಕೇರಿ:Kiran Commodities, ಆಯದ್ದು, 515.00
- ಕೊಡಗು ಸಿದ್ದಾಪುರ:Trust Spices ಆಯದ್ದು, 505.00
- ಗೋಣಿಕೊಪ್ಪ:Sri Maruthi, ಆಯದ್ದು, 510.00
- ಕಳಸ :PIB Traders, ಆಯದ್ದು 505.00
- ಕಾರ್ಕಳ:Kamadhenu, 9845256188, 505.00
- ಪುತ್ತೂರು :ಕ್ಯಾಂಪ್ಕೋ, ಆಯದ್ದು, 500.00
- ಮಂಗಳೂರು:PB Abdul-7204032229, ಆಯದ್ದು, 510.00
- ಮಂಗಳೂರು; ಕ್ಯಾಂಪ್ಕೋ, ಆಯದ್ದು, 500.00
- ಶಿರ್ಸಿ :Kadamba Marketing, ಆಯದ್ದು, 490.00
ಶುಂಠಿ ದರ:
ಒಣ ಶುಂಠಿಗೆ ಉತ್ತರ ಭಾರತದ ಬೇಡಿಕೆ ಸ್ವಲ್ಪ ಸ್ವಲ್ಪ ಪ್ರಾರಂಭವಾಗಿದೆ ಎಂಬ ವದಂತಿಗಳಿವೆ. ವ್ಯಾಪಾರಿಗಳು ಶುಂಠಿಗೆ ಬೇಡಿಕೆ ಮಾಡಲಾರಂಭಿಸಿದ್ದಾರೆ. ಹಾಗಾಗಿ ಹಸಿ ಶುಂಠಿ ಕ್ವಿಂಟಾಲು ಮೇಲೆ ರೂ. 100 ಹೆಚ್ಚಳವಾದಂತಿದೆ. ಕೊರೋನಾ ಇತ್ಯಾದಿಗಳು ಸದ್ಯಕ್ಕೆ ಶಾಂತವಾದ ಕಾರಣ ವ್ಯಾಪಾರ ವ್ಯವಹಾರ ಉತ್ತಮವಾಗಲಾರಂಭಿಸಿದೆ. ಹಾಗಾಗಿ ಸ್ವಲ್ಪ ದರ ಏರಿಕೆ ಆಗುವ ಸಾಧ್ಯತೆ ಇದೆ.
ಇಂದು ಧಾರಣೆ:
- ಶಿವಮೊಗ್ಗ: 1400, 1600, 1500
- ಸಾಗರ: 1000, 1150, 1000
- ಶಿರಸಿ: 1000, 1050, 1000
- ಚನ್ನರಾಯಪಟ್ನ: 1000, 1000, 1000
- ಬೇಲೂರು:1000, 1100, 1000
- ಹಾಸನ: 1000, 1050, 1000
- ಚೆನ್ನಗಿರಿ: 1000, 1000, 1000
- ಶಿಕಾರಿಪುರ: 1000, 1050, 1000
ಕೊಬ್ಬರಿ ಧಾರಣೆ: ಕ್ವಿಂಟಾಲು.
- ಅರಸೀಕೆರೆ :17800
- ತಿಪಟೂರು:17600
- ಮಂಗಳೂರು:9000-12000
- ಪುತ್ತೂರು:9000-10500
- ಚನ್ನರಾಯಪಟ್ನ: 7500-9500
- ತುರುವೇಕೆರೆ:17800
ಕಾಫೀ ದಾರಣೆ:
ಕಾಫಿ ದಾರಣೆ ತುಸು ಏರಿಕೆ ಆಗಿದೆ. ರೋಬಸ್ಟಾ ಕೆಲವು ಕಡೆ ಮಾತ್ರ ಅಲ್ಪ ಸ್ವಲ್ಪ ಕೊಯಿಲು ಇದೆ. ಉಳಿದೆಡೆ ಕೊಯಿಲು ಮುಗಿದು ಸಿದ್ದವಾಗಿದೆ.ಒಂದೆರಡು ತಿಂಗಳಲ್ಲಿ ಸ್ವಲ್ಪ ದರ ಏರಿಕೆ ಆಗಬಹುದು. ಯುದ್ದದ ವಾತಾವರಣ ಉಂಟಾದರೆ ಸ್ವಲ್ಪ ಇಳಿಕೆ ಆಗಬಹುದು.
- ಅರೇಬಿಕಾ ಪಾಚ್ ಮೆಂಟ್:16,000 -16,100 (50Kg)
- ಅರೇಬಿಕಾ ಚೆರಿ:7200- 7600(50Kg)
- ರೋಬಸ್ಟಾ ಪಾರ್ಚ್ ಮೆಂಟ್: 8000 8150 (50Kg)
- ರೋಬಸ್ಟಾ ಚೆರಿ:3900 -4270(50Kg)
- ರೋಬಸ್ಟಾ ಹಣ್ಣು :32 -33 ಕಿಲೋ
ರಬ್ಬರ್ ಧಾರಣೆ: ಕಿಲೊ.
ಇಂದು ರಬ್ಬರ್ ದರ ರೂ. 1 ಇಳಿಕೆಯಾಗಿದೆ. ರಬ್ಬರ್ ಗೆ ದಿನಕ್ಕೊಂದು ದರ ಎಂಬ ಸ್ಥಿತಿ ಉಂಟಾಗಿದೆ. ಒಮ್ಮೆ ಏರಿಕೆಯಾಗಿವುದು ಹಾಗೆಯೇ ಕೆಳಕ್ಕೆ ಬರುವುದು ಆಗುತ್ತಿದೆ.
- Grade 1X- 174-00 (kg)
- RSS 3-158.50
- RSS 4 -158.00
- RSS 5 -153.00
- Lot : 150.00
- Scrap:104.00-112.00
ರಶ್ಯಾ ಮತ್ತು ಉಕ್ರೇನ್ ನಡುವಣ ಯುದ್ಧದ ವಾತಾವರಣ ಶೇರು ಮಾರುಕಟ್ಟೆಯನ್ನು ಕೆಳಕ್ಕಿಳಿಸಿದೆ. ಈ ಪರಿಣಾಮದಿಂದ ಕೆಲವರು ಹಣ ನಷ್ಟ ಹೊಂದಿದ್ದಾರೆ. ಯುದ್ದ ಆದರೂ ಆಗದಿದ್ದರೂ ಮಾರುಕಟ್ಟೆಯ ಮೇಲೆ ತಾತ್ಕಾಲಿಕ ಅಥವಾ ಸ್ವಲ್ಪ ಧೀರ್ಘಕಾಲಿಕ ಪರಿಣಾಮ ಉಂಟಾಗುತ್ತದೆ. ಕೆಲವರು ಶೇರು ಪೇಟೆಯಲ್ಲಿ ಹೂಡುವವರೂ ಮತ್ತೆ ಕೆಲವರು ನಗದೀಕರಣ ಮಾಡಿಕೊಳ್ಳುವರೂ ಇರುವ ಕಾರಣ ಇತರ ವ್ಯವಹಾರಗಳಲ್ಲಿ ಹೂಡಿಕೆಗೆ ಅಡಚಣೆ ಉಂಟಾಗುತ್ತದೆ. ಹಾಗಾಗಿ ಕೃಷಿ ಉತ್ಪನ್ನಗಳಾದ ಅಡಿಕೆ, ಮೆಣಸು, ಕಾಫೀ ಇತ್ಯಾದಿ ಬೆಳೆಗಳ ಮೇಲೆ ತಾತ್ಕಾಲಿಕ ಬೆಲೆ ಇಳಿಕೆ ಉಂಟಾಗಲೂ ಬಹುದು.