krushiabhivruddi

ರೈತರ ನಷ್ಟಕ್ಕೆ ಪರಿಹಾರ ಇದ್ದರೆ ಇದೊಂದೇ

ತಾವು ಮಾಡದ ತಪ್ಪಿಗೆ ರೈತರು ಕಷ್ಟ ಅನುಭವಿಸುತ್ತಿದ್ದಾರೆ. ದ್ರಾಕ್ಷಿ ಬೆಳೆಗಾರರು ತಮ್ಮ ದ್ರಾಕ್ಷಿಯನ್ನು ತಿಪ್ಪೆಗೆ ಸುರಿದಿದ್ದಾರೆ. ಟೊಮೇಟೋ ಬೆಳೆದವರು ಕೊಯಿಲು ಮಾಡಲೇ ಇಲ್ಲ. ಇನ್ನು ಅನನಾಸು, ಕಲ್ಲಂಗಡಿ ಬಹುತೇಕ ಎಲ್ಲಾ ಬೆಳೆ ಬೆಳೆದವರೂ ತಲೆಗೆ ಕೈ ಇಟ್ಟು ಕುಳಿತಿದ್ದಾರೆ. ಯಾರಿಗೂ ವಿಮೆ ಇಲ್ಲ. ಇವರ ನಷ್ಟಕ್ಕೆ ಪರಿಹಾರ ಕೊಡುವುದು ಹೇಗೆ? ಸರಕಾರ ಸಾಲ ಮನ್ನಾ ಮಾಡಬಹುದೇ? ಬೆಳೆ ನಷ್ಟ ಕೊಡಬಹುದೇ? ಯಾವುದಕ್ಕೂ ಸರಕಾರದ ಖಜಾನೆಯಲ್ಲಿ ದುಡ್ಡು ಬೇಕಲ್ಲವೇ? ಇನ್ನು ಒಂದೆರಡು ತಿಂಗಳಲ್ಲಿ ಎಲ್ಲಾ ಚಿತ್ರಣ ಗೊತ್ತಾಗುತ್ತದೆ. ಸರಕಾರೀ…

Read more

ಅನನಾಸು ಬೆಳೆಗಾರರ ಪಾಲಿಗೆ ಇದು ಕರಾಳ ವರ್ಷ.

ಅನನಾಸು ಬೆಳೆಗಾರರು ಬೆಳೆ ಬೆಳೆಸಿ ಈ ತನಕ  ಮಾಡಿದ ಸಂಪಾದನೆಯನ್ನೆಲ್ಲಾ ಈ ವರ್ಷ ಕಳೆದುಕೊಳ್ಳುವಂತಾಗಿದೆ. ಸಾಲಗಳು ಮೈಮೇಲೆ ಬಂದಿದೆ. ಕೃಷಿ ಉತ್ಪನ್ನದ ಮಾರುಕಟ್ಟೆ ಎಂಬುದು ಬಹಳ ಜಠಿಲ ಸಂಗತಿ. ಸಣ್ಣ ಪುಟ್ಟ ಘಟನೆಗಳೂ, ವದಂತಿಗಳೂ ರೈತರ ಬದುಕಿನಲ್ಲಿ ಆಟ ಆಡುತ್ತವೆ. ಈ ವರ್ಷ ಬಹುತೇಕ ಕೃಷಿಕರ ಬದುಕಿನಲ್ಲಿ  ಕೊರೋನಾ ಸಂಕ್ರಾಮಿಕ ರೋಗ ಆಟ ಆಡಿದೆ. ಈ ರೈತರು ಇನ್ನು ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಗುವ ಸಾಧ್ಯತೆ ಇದೆ. ಸಂಪೂರ್ಣ ನಷ್ಟ: ಕರಾವಳಿಯ ಜಿಲ್ಲೆಗಳಲ್ಲಿ ಸುಮಾರು 2000 ಎಕ್ರೆಗೂ…

Read more

ಬಾಳೆಗೊನೆ ಯಾಕೆ ಹೀಗಾಗುತ್ತದೆ ಗೊತ್ತೇ?.

ಬಾಳೆಗೆ ಎಲ್ಲಾ ಗೊಬ್ಬರ, ನಿರ್ವಹಣೆ ಮಾಡಿದಾಗಲೂ ನಿಸ್ತೇಜವಾಗಿ ಎಲೆ ಹಳದಿಯಾಗುತ್ತಾ ಸಣಕಲು ಕಾಯಿಯ ಗೂನೆ ಬಿಡುವುದು, ಕಾಂಡದ ಭಾಗದಿಂದ ಅಥವಾ ಗೊನೆ ಭಾಗದಿಂದ ಮುರಿದು ಬೀಳುವುದು, ನಾವೆಲ್ಲಾ ಕಂಡ ಸಮಸ್ಯೆ. ಇದು ಗೊಬ್ಬರ ಅಥವಾ ಇನ್ಯಾವುದೇ ನಿರ್ವಹಣೆಯ ಕೊರತೆಯಿಂದ ಆಗುವುದಲ್ಲ. ಕೀಟ ಸಮಸ್ಯೆಯಿಂದ. ಯಾಕೆ ಹೀಗಾಗುತ್ತದೆ? ಒಂದು ಜಾತಿಯ ದುಂಬಿ ಬಾಳೆಯ ಗಡ್ಡೆಯಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಹುಳವಾಗುತ್ತದೆ. ಈ ಹುಳವು ಮಧ್ಯದ ದಂಟಿನ ಮೂಲಕ ಮೇಲೇರಿ ದಂಟನ್ನು ಭಕ್ಷಿಸಿ ಬೆಳೆಯುತ್ತದೆ. ಮತ್ತೆ ಪುನಹ ಲಾರ್ವಾ…

Read more
ಹಾಲು ಖರೀದಿ

ಹಾಲು ಖರೀದಿ ನಿಲ್ಲಿಸಿದರೇ ?. ಹೆದರಬೇಡಿ. ಇಲ್ಲಿದೆ ಪರಿಹಾರ.

ಹೈನುಗಾರರು ಉತ್ಪಾದಿಸಿದ ಹಾಲನ್ನು  ಸ್ಥಳೀಯ ಉತ್ಪಾದಕ  ಖರೀದಿಸುವುದಿಲ್ಲ  ಎಂದಾಕ್ಷಣ ಹೈನುಗಾರರು ಯಾಕೆ ಕಂಗಾಲಾಗಬೇಕು. ಹಾಲು ತಾಜಾ ರೂಪದಲ್ಲಿ ಮಾತ್ರ  ಮಾರಲು ಇರುವ ವಸ್ತು ಅಲ್ಲ. ಇದರಿಂದ ಬೇರೆ ಬೇರೆ ಉತ್ಪನ್ನಗಳನ್ನೂ ಮಾಡಬಹುದು. ಇದು ಎಲ್ಲಾ ಹೈನುಗಾರರಿಗೂ ತಿಳಿದಿರಬೇಕು. ಯಾವಾಗಲೂ ನಮ್ಮ ರೈತರಿಗೆ ಬೇರೆ ಬೇರೆ ಆಯ್ಕೆಗಳಿರಬೇಕು. ಒಂದೇ ಆಯ್ಕೆ ಆದರೆ ಹೀಗೇ ಆಗುವುದು.  ಹಾಲಿನ ಬೇಡಿಕೆ ಕಡಿಮೆಯಾದ ಕಾರಣ, ಅಥವಾ ಹಾಲು ಸಂಗ್ರಹಣೆ ಇಂಥಹ ಸಮಯದಲ್ಲಿ ಕಷ್ಟವಾದ ಕಾರಣ. ಮಹಾಮಂಡಲದ ಆದೇಶದಂತೆ ಹಾಲು ಕೊಳ್ಳುವುದನ್ನು ಸ್ಥಗಿತಗೊಳಿಸಿರಬಹುದು. ಸರಿ…

Read more

ಬೇಗ ಮಳೆ ಬರುವ ಸೂಚನೆ ಇದೆ- ಎಚ್ಚರ.

ಕಳೆದ ಕೆಲವು ದಿನಗಳಿಂದ ಸುಡುಬಿಸಿಲಿನ ಪ್ರಭಾವ ಹೆಚ್ಚಾಗಿದ್ದು, ಇದು ಮಳೆ ಬರುವ ಮುನ್ಸೂಚನೆಯಾಗಿದೆ. ವಾತಾವರಣದಲ್ಲಿ ಬಿಸಿ ಹೆಚ್ಚಾದಂತೆ ಮಳೆ ಬರುವ ಸಾಧ್ಯತೆ ಹೆಚ್ಚು. ನಮ್ಮ  ಹಿರಿಯರು  ಕೆಲವು  ಹವಾಮಾನ ಮುನ್ಸೂಚನೆಗಳನ್ನು ಹೇಳಿದ್ದಾರೆ. ಗಣಪತಿ ಜಾತ್ರೆಯ ಓಕುಳಿಯಂದು ಮಳೆ ಬರುತ್ತದೆ. ಧರ್ಮಸ್ಥಳ ದೀಪೋತ್ಸವದಂದು ಮಳೆ ಬರುತ್ತದೆ. ಹಾಗೆಯೇ ಇನ್ನೂ ಕೆಲವು ವಿಷೇಶ ದಿನಗಳ ಸಂಧರ್ಭದಲ್ಲಿ ಮಳೆ ಬರುವ ಸೂಚನೆಯನ್ನು ಕೊಟ್ಟಿದ್ದಾರೆ. ಅದು ಸುಮ್ಮನೆ ಅಲ್ಲ. ಸಾಮಾನ್ಯವಾಗಿ ಅಥವಾ ಹೆಚ್ಚಿನ ಸಂದರ್ಭಗಳಲ್ಲಿ  ಇದು ನಿಜವಾಗುತ್ತದೆ. ಮಳೆಯ ಈ ಮುನ್ಸೂಚನೆಯು ಹವಾಮಾನಕ್ಕೂ…

Read more

ಹತ್ತಿ ಬೀಜದ ದರ ಏರಿದೆ- ರಾಯಧನ ಇಳಿದಿದೆ.

ಜೈವಿಕ ತಂತ್ರಜ್ಞಾನದ ಬಿಟಿ ಹತ್ತಿಗೆ ಬೇಯರ್ ಕಂಪೆನಿಗೆ ಕೊಡಬೇಕಾದ ರಾಯಲ್ಟಿಯನ್ನು  ಭಾರತ ಸರಕಾರ ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿದೆ. ಆದರ ಪರಿಣಾಮ ಇಲ್ಲಿ ಹತ್ತಿ ಬೀಜದ ಬೆಲೆ ಕಡಿಮೆಯಾಗಬೇಕಿತ್ತು. ಆದರೆ ಬೆಲೆ  ಮಾತ್ರ 2.5 %  ಹೆಚ್ಚಳವಾಗಿದೆ. ನಾವು ಬೆಳೆಯುವ ಬಿಟಿ ಹತ್ತಿಯ ಬಿಟಿ ತಂತ್ರಜ್ಞಾನದ ಮೂಲ ಅಮೆರಿಕಾ ದೇಶದ ಮಾನ್ಸಂಟೋ ಕಂಪೆನಿ.  (ಈ ಕಂಪೆನಿಯನ್ನು ಜರ್ಮನ್ ಮೂಲದ ಬೇಯರ್ ಎಂಬ ಔಷಧ ಕಂಪೆನಿ ಖರೀದಿಸಿದೆ) ಇಲ್ಲಿ ಯಾವುದೇ ಕಂಪೆನಿ ಬಿಟಿ ಹತ್ತಿ ಬೀಜ ಉತ್ಪಾದಿಸಿದರೂ ಅದರ…

Read more

ವರ್ಜಿನ್ ಕೋಕೋನಟ್ (VCO) ಎಂಬುದು ಎಲ್ಲಾ ಸತ್ಯವಲ್ಲ.

ಕೊರೋನಾ ರೋಗದ ವಿರುದ್ಧ ದೇಹದ ಅಂತಃ ಶಕ್ತಿ ಹೆಚ್ಚಿಸಲು ವರ್ಜಿನ್ ಕೋಕೋನಟ್ ಆಯಿಲ್ ಒಳ್ಳೆಯದು ಎಂದು ಪ್ರಚಾರ ಪ್ರಾರಂಭವಾಗಿದೆ. ಅದರ ಜೊತೆಗೆ ಈ ಎಣ್ಣೆಗೆ ಬೇಡಿಕೆ ಹೆಚ್ಚಿದೆ. ನಿಜವಾಗಿ ವರ್ಜಿನ್ ಕೋಕೋನಟ್ ಆಯಿಲ್ ಮತ್ತು ತೆಂಗಿನೆಣ್ಣೆಗೆ ಏನು ವ್ಯತ್ಯಾಸ. ತೆಂಗಿನ ಕಾಯಿಯಿಂದಲೇ ಹಿಂದಿನಿಂದಲೂ ಎಣ್ಣೆ ತೆಗೆಯುತ್ತಿದ್ದುದು. ಇತ್ತೀಚಿನ ಕೆಲವು ವರ್ಷಗಳ ಹಿಂದೆ ನಮ್ಮಲ್ಲಿ ಶತಮಾನಗಳಿಂದ ಪ್ರಚಲಿತದಲ್ಲಿದ್ದ ಗಾಣದಿಂದ ಎಣ್ಣೆ ತೆಗೆಯುವ ತಂತ್ರಜ್ಞಾನ ವನ್ನು ಓವರ್ ಟೇಕ್ ಮಾಡಿ ಬಂದ ತಂತ್ರಜ್ಞಾನವೇ ವರ್ಜಿನ್ ಕೋಕೋನಟ್ ಆಯಿಲ್. ತೆಂಗಿನ ಕಾಯಿಯಿಂದ…

Read more
ripped coco beans

ಕೊಕ್ಕೋ – ಹಸಿ ಬೀಜದ ಸಂಸ್ಕರಣೆಯ ವಿಧಾನ .

ಅಡಿಕೆ – ರಬ್ಬರ್ ಒಂದಷ್ಟು ಸಮಯ ದಾಸ್ತಾನು ಇಟ್ಟು ನಂತರ ಮಾರಾಟ ಮಾಡಬಹುದು. ಆದರೆ ಕೊಕ್ಕೊ ಹಸಿ ಬೀಜವನ್ನು ಕೋಡು ಒಡೆದ ದಿನವೇ ಮಾರಾಟ ಮಾಡಬೇಕು. ಖರೀದಿದರಾರೇ ಇಲ್ಲದ ಮೇಲೆ ಮಾರುವುದು ಯಾರಿಗೆ? ಚಿಂತೆ ಬೇಡ ಅದನ್ನು ಒಣಗಿಸಿ. ಮತ್ತೆ ಮಾರಾಟ ಮಾಡಬಹುದು.    ನಮ್ಮಿಂದ ಖರೀದಿ ಮಾಡಿದ  ಕೊಕ್ಕೋ ಹಸಿ ಬೀಜಗಳನ್ನು ಖರೀದಿದಾರರು ವೈಜ್ಞಾನಿಕ ಹುಳಿ ಬರಿಸಿ  ಒಣಗಿಸುತ್ತಾರೆ. ನಂತರ ಅದರ ಉತ್ಪನ್ನಗಳನ್ನು ತಯಾರಿ ಮಾಡುತ್ತಾರೆ. ಸರಿಯಾಗಿ ಒಣಗಿಸಿ ನಾವು ಮಾರಾಟ ಮಾಡಿದರೂ ಸಹ ಅವರು…

Read more

ಅಡಿಕೆ ನಿಷೇಧವಾದರೂ ಅಚ್ಚರಿ ಇಲ್ಲ.

ಉತ್ತರ ಪ್ರದೇಶದಲ್ಲಿ ಸರಕಾರೀ ಕಚೇರಿಗಳ ಪರಿಸರದಲ್ಲಿ ಗುಟ್ಕಾ ,ಪಾನ್ ಮಸಾಲೆ ತಿನ್ನಬಾರದು ಎಂದು ಅಲ್ಲಿನ ಮುಖ್ಯಮಂತ್ರಿಗಳು  ಆದೇಶ ನೀಡಿದ್ದಾರೆ. UP CM Yogi Adityanath bans gutkha, paan masala in all government offices – India today) ಇತರ ರಾಜ್ಯಗಳೂ ಇದನ್ನು ಅನುಸರಿಸಿದರೆ ಅಡಿಕೆ ಬೆಳೆಗಾರರ ಪಾಡು ಹೇಳ ತೀರದು. ಸ್ವಚ್ಚ ಪರಿಸರದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದ ಕೃಷಿಕರು ಮತ್ತು ಕೃಷಿ ವ್ಯವಸ್ಥೆ ಯ ಮೇಲೆ ದೊಡ್ಡ ಹೊಡೆತವೇ  ಬಿದ್ದಿದೆ. ಎಷ್ಟು ಸಮಯವೋ ತಿಳಿಯದಾಗಿದೆ.  ಎಲ್ಲಾ…

Read more

ಸ್ವಾವಲಂಬಿ ಬದುಕಿಗೆ ಮನೆಯಂಗಳದಲ್ಲಿ ತರಕಾರಿ.

ಅವರವರು ಬೆಳೆದ ತರಕಾರಿ ಹಣ್ಣು  ಹಂಪಲುಗಳನ್ನು ಅವರವರೇ ಬಳಸಿದರೆ  ಅದರಷ್ಟು ಆರೋಗ್ಯಕ್ಕೆ ಒಳ್ಳೆಯದು ಬೇರೊಂದಿಲ್ಲ. ನಾವು ಅಂಗಡಿಯಿಂದ ತರುವ ತರಕಾರಿ ಹಣ್ಣು  ಹಂಪಲುಗಳು ಎಷ್ಟೆಂದರೂ ಅಷ್ಟೇ. ಅದರ ಗಾತ್ರ ದೊಡ್ದದಾಗಲು ನೋಟ ಆಕರ್ಷಕವಾಗಿರಲು ಲೆಕ್ಕಕ್ಕಿಂತ ಹೆಚ್ಚು ಪೋಷಕಾಂಶಗಳನ್ನು ,ನಿಷೇಧಿತ ರಕ್ಷಕಗಳನ್ನು  ಬಳಕೆ  ಮಾಡಲಾಗುತ್ತದೆ ಎನ್ನುತ್ತಾರೆ. ಎಂದೋ ಕೊಯಿದ, ಎಲ್ಲಿಂದಲೋ ತಂದ ತರಕಾರಿ ಹಣ್ಣು ಹಂಪಲುಗಳಲ್ಲಿ ಶಿಲೀಂದ್ರ ಬೆಳೆದಿರುವುದೂ ಇದೆ. ವಿಷ ರಾಸಾಯನಿಕ ಬಳಸಿದ ಉಳಿಕೆ ಅಂಶ ಇರುವುದೂ ಇದೆ. ಇದನ್ನು ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಅವರವರೇ…

Read more
error: Content is protected !!