
ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು?– ಇಲ್ಲಿದೆ ಮಾಹಿತಿ.
ಒಂದು ಬೆಳೆಗೆ ಹೆಚ್ಚಿನ ಬೆಲೆ, ಬೇಡಿಕೆ ಇದೆ ಎಂದಾಕ್ಷಣ ಎಲ್ಲರೂ ಆ ಬೆಳೆ ಬೆಳೆಸಬೇಕು ಎಂದು ಉತ್ಸುಕರಾಗುತ್ತಾರೆ. ಅದಕ್ಕನುಗುಣವಾಗಿ ಪ್ರಚಾರಗಳೂ ಜನರನ್ನು ಗೊಂದಲಕ್ಕೀಡು ಮಾಡುತ್ತವೆ. ಸಸ್ಯೋತ್ಪಾದಕರೂ ಹೆಚ್ಚಾಗುತ್ತಾರೆ. ಎಲ್ಲವೂ ಎಷ್ಟು ಉತ್ತಮವೋ ಅಷ್ಟೇ ಅಪಾಯಕಾರಿಯೂ ಅಗಿರುತ್ತದೆ. ಈ ಸಂದರ್ಭದಲ್ಲಿ ರೈತರಿಗೆ ಬಟರ್ ಫ್ರೂಟ್ ಹೇಗೆ ಬೆಳೆದರೆ ಉತ್ತಮ ಇಳುವರಿ ಪಡೆಯಬಹುದು ಎಂಬ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಯಾವುದೇ ಬೆಳೆ ಇರಲಿ. ಅದನ್ನು ಬೆಳೆಸುವ ಮುಂಚೆ ಅದರ ಪೂರ್ವಾಪರ ವನ್ನು ಕೂಲಂಕುಶವಾಗಿ ತಿಳಿದುಕೊಳ್ಳಬೇಕು. ಆ ಬೆಳೆಯ ಬಗ್ಗೆ ಸ್ಥಳೀಯವಾಗಿ…