ಭತ್ತಕ್ಕಿಂತ ಲಾಭದ ಬೆಳೆ ನವಣೆ.
ಸಿರಿ ಧಾನ್ಯಗಳ (Minor millets) ಸಾಲಿನಲ್ಲಿ ಪ್ರಮುಖವಾದ ನವಣೆಗೆ ಬೇಡಿಕೆ ಚೆನ್ನಾಗಿದ್ದು, ಕಡಿಮೆ ಇಳುವರಿ ಕೊಡಬಲ್ಲ ಖುಷ್ಕಿ ಭತ್ತದ ಹೊಲದಲ್ಲಿ ಇದನ್ನು ಬೆಳೆದರೆ ಲಾಭವಿದೆ. “ ನವಣೆಯನ್ನು ತಿನ್ನುವನು ಹವಣಾಗಿಹನು ಸರ್ವಜ್ಞ” ನವಣೆ ಆರೋಗ್ಯ ಹಾಗೂ ದೇಹ ಸೌಂದರ್ಯ ಕಾಪಾಡುವುದಕ್ಕೆ ಒಳ್ಳೆಯದು ಎಂದು ಸರ್ವಜ್ಞ ತಿಳಿಸಿದ್ದಾನೆ. ಒಂದು ಕಾಲದಲ್ಲಿ “ಬಂಗಾರಕ್ಕಿ ಅನ್ನ” ಎಂದೇ ಪ್ರಸಿದ್ದಿಯಾಗಿತ್ತು ನವಣೆ ಅಕ್ಕಿ. ಹಿಂದಿನವರಿಗೆ ನವಣೆಯ ಬಿಸಿ ಅನ್ನಕ್ಕೆ ತುಪ್ಪ ನಮ್ಮ ರೈತರ ದಿನನಿತ್ಯದ ಆಹಾರವಾಗಿತ್ತು. ಈಗ ಅದು ಕಣ್ಮರೆಯಾಗಿದೆ. ಇಂದು ನಮ್ಮ…