
ಬೆಂಡೆಯ ಹಳದಿ ಎಲೆ ರೋಗಕ್ಕೆ ಮದ್ದು ಇಲ್ಲ.
ಬೆಂಡೆ, ಅಪರೂಪದಲ್ಲಿ ಕುಂಬಳ ಜಾತಿಯ ಸಸ್ಯಗಳಿಗೆ ಬರುವ ಪ್ರಾಮುಖ್ಯ ರೋಗ ಎಂದರೆ ಎಲೆ ಹಳದಿಯಾಗುವ ವೈರಸ್ ರೋಗ. ವೈರಸ್ ಎಂಬುದಕ್ಕೆ ಕನ್ನಡದಲ್ಲಿ ನಂಜಾಣು ಎಂದು ಹೇಳಲಾಗುತ್ತದೆ. ನಂಜಾಣು ಎನ್ನುವುದು ಅತೀ ಸೂಕ್ಷ್ಮ ಜೀವಿಯಾಗಿದ್ದು, ಇದನ್ನು ಸರಿಯಾಗಿ ಅಭ್ಯಸಿಸಿ ಅದಕ್ಕೆ ಪ್ರತ್ಯಔಷಧಿ ತಯಾರಿಸಲು ತುಂಬಾ ಕಷ್ಟ. ಏನಿದ್ದರೂ ನಿರೋಧಕ ಶಕ್ತಿ ಹೊಂದಿದ ತಳಿಯನ್ನು ಆಯ್ಕೆ ಮಾಡಬೇಕು ಅಷ್ಟೇ. ಬೆಂಡೆಯ ಎಲೆ ಹಳದಿ ರೋಗ ಇಂತದ್ದೇ ಆಗಿದೆ. ಬಿಳಿ ಅಷ್ಟಪಟ್ಟಿ ಬೆಂಡೆ, ಅಥವಾ ಈಗ ಹೊಸತಾಗಿ ಕರೆಯಲಾಗುವ ‘ಕಾರ್ಲ ಬೆಂಡೆ’ ಅಥವಾ…