ಬಾಳೆಯ ಕಾಂಡದ ಈ ರೋಗಕ್ಕೆ ಪರಿಹಾರ ಇದು.

ಬಾಳೆಯಲ್ಲಿ ಕಾಂಡ ಎಂಬುದು ಎಲೆಯ ಕವಚಗಳು ಪರಸ್ಪರ ಒತ್ತೊತ್ತಾಗಿ ಸೇರಿದಾಗ ಉಂಟಾಗುತ್ತದೆ. ಬಾಳೆಗೆ ಕಾಂಡ ಎಂಬುದು ಇಲ್ಲ. ಇದನ್ನು ಹುಸಿ ಕಾಂಡ ಎನ್ನುತ್ತಾರೆ. ಹುಸಿ ಕಾಂಡ ಉಂಟಾಗಬೇಕಾದರೆ  ಎಲೆಯ ತೊಟ್ಟಿನ ಭಾಗ (petiole)ಗಳು ಪರಸ್ಪರ ಅಂಟಿಕೊಂಡು ಬೆಳೆಯಬೇಕು. ಅದು ಬಿಚ್ಚಿಕೊಂಡಿದ್ದರೆ ಅದು ಒಂದು ರೋಗ. ಇದು ಒಂದು ನಂಜಾಣು ರೋಗದ ಲಕ್ಷಣ.  ಬಾಳೆ ಸಸ್ಯ 2-3 ತಿಂಗಳ ಬೆಳೆವಣಿಗೆಯಲ್ಲಿ ಇದು ಜಾಸ್ತಿ.   ಪ್ರಾರಂಭದಲ್ಲಿ ಎಲೆದಂಟು ಕಾಂಡದಿಂದ ಬೇರ್ಪಟ್ಟು ಕಾಂಡ ಸಪುರವಾಗುತ್ತಾ ಹೋಗುತ್ತದೆ. ಇಂತಹ ಬಾಳೆ ಕೆಲವೊಮ್ಮೆ…

Read more

ಬಾಳೆಗೊನೆ ಯಾಕೆ ಹೀಗಾಗುತ್ತದೆ ಗೊತ್ತೇ?.

ಬಾಳೆಗೆ ಎಲ್ಲಾ ಗೊಬ್ಬರ, ನಿರ್ವಹಣೆ ಮಾಡಿದಾಗಲೂ ನಿಸ್ತೇಜವಾಗಿ ಎಲೆ ಹಳದಿಯಾಗುತ್ತಾ ಸಣಕಲು ಕಾಯಿಯ ಗೂನೆ ಬಿಡುವುದು, ಕಾಂಡದ ಭಾಗದಿಂದ ಅಥವಾ ಗೊನೆ ಭಾಗದಿಂದ ಮುರಿದು ಬೀಳುವುದು, ನಾವೆಲ್ಲಾ ಕಂಡ ಸಮಸ್ಯೆ. ಇದು ಗೊಬ್ಬರ ಅಥವಾ ಇನ್ಯಾವುದೇ ನಿರ್ವಹಣೆಯ ಕೊರತೆಯಿಂದ ಆಗುವುದಲ್ಲ. ಕೀಟ ಸಮಸ್ಯೆಯಿಂದ. ಯಾಕೆ ಹೀಗಾಗುತ್ತದೆ? ಒಂದು ಜಾತಿಯ ದುಂಬಿ ಬಾಳೆಯ ಗಡ್ಡೆಯಲ್ಲಿ ಸೇರಿ ಅಲ್ಲಿ ಮೊಟ್ಟೆ ಇಟ್ಟು ಹುಳವಾಗುತ್ತದೆ. ಈ ಹುಳವು ಮಧ್ಯದ ದಂಟಿನ ಮೂಲಕ ಮೇಲೇರಿ ದಂಟನ್ನು ಭಕ್ಷಿಸಿ ಬೆಳೆಯುತ್ತದೆ. ಮತ್ತೆ ಪುನಹ ಲಾರ್ವಾ…

Read more

ಕಾಫಿ ಬೆಳೆಗೆ ಇದು ಅತೀ ದೊಡ್ಡ ಸಮಸ್ಯೆ.

ಎಲೆಗಳ ಮೇಲೆ ತಾಮ್ರದ  ಕಲೆಗಳು ಕಂಡು ಬಂದು ಅದು ಒಣಗಿ ಎಲೆಗಳು ಉದುರಿ ಸಸ್ಯದಲ್ಲಿ ಬರೇ ಕಡ್ಡಿ ತರಹದ  ಗೆಲ್ಲುಗಳು ಮಾತ್ರ ಉಳಿಯುವ ಈ ರೋಗ ಇತ್ತೀಚೆಗೆ ಕಾಫೀ ಬೆಳೆಯಲಾಗುವ ಪ್ರದೇಶಗಳಲ್ಲಿ ವ್ಯಾಪಕವಾಗುತ್ತಿದೆ. ಇದು ಬೆಳೆಗಾರರಲ್ಲಿ ಅತಂಕವನ್ನು ಉಂಟುಮಾಡಿದೆ.. ಎಲೆ  ತುಕ್ಕು ರೋಗ , ಅರಶಿನ ಚುಕ್ಕೆ ಅಥವಾ ಎಲೆ ಚುಕ್ಕೆ ರೋಗ, leaf rust                 ಎಂಬುದು  ಇದರ  ಹೆಸ ರು.  ಈ ರೋಗ ಆರ್ಥಿಕವಾಗಿ ಬೆಳೆಗಾರರಿಗೆ…

Read more
ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ತೆಂಗಿನ ಕಾಂಡದಲ್ಲಿ ರಕ್ತ ಸೋರುವುದೇಕೆ?

ಕಾಂಡ ಎಂದರೆ ಅದರಲ್ಲಿ ಎಲ್ಲಾ ಜೀವ ಸತ್ವಗಳೂ ಸರಬರಾಜು ಆಗುವ ಸ್ಥಳ. ಇಲ್ಲಿ ಯಾವುದೇ ಗಾಯವಾದರೂ ರಕ್ತ ಸ್ರವಿಸಿದಂತೆ ರಸಸ್ರಾವ ಆಗುತ್ತದೆ.ಗಾಯ ಅಲ್ಲದೆ ಕೆಲವು ರೋಗ ಕಾರಕಗಳ ಸೋಂಕಿನಿಂದಲೂ ರಸಸ್ರಾವ ಆಗುತ್ತದೆ. ಇದನ್ನು ಸ್ಟೆಮ್ ಬ್ಲೀಡಿಂಗ್ ಎನ್ನುತ್ತಾರೆ. ಇದೊಂದು ಪ್ರಮುಖ ರೋಗವಾಗಿದ್ದು, ತೆಂಗು ಬೆಳೆಯುವ ಬಹುತೇಕ ಪ್ರದೇಶಗಳಲ್ಲಿ  ಇದೆ. ಮೊದಲಾಗಿ ಇದು ಶ್ರೀಲಂಕಾ ದೇಶದಲ್ಲಿ ಕಂಡು ಬಂತು. ನಂತರ ನಮ್ಮ ದೇಶ ಮತ್ತು ತೆಂಗು ಬೆಳೆಯಲಾಗುವ ಇತರ ದೇಶಗಳಿಗೂ ಪ್ರಸಾರವಾಯಿತು. ಹೇಗೆ ರೋಗ ಬರುತ್ತದೆ: ಕಾಂಡದಲ್ಲಿ ರಸ…

Read more
ತೆಂಗಿನ ಮರದ ಸುಳಿ ಕೊಳೆ

ತೆಂಗಿನ ಮರದ ಸುಳಿ ಕೊಳೆಯುವುದು ಯಾಕೆ? ಪರಿಹಾರ ಏನು?

ತೆಂಗಿನ ಮರದ ಶಿರ ಹೋಗುವುದಕ್ಕೆ ವಾತಾವರಣ ಕಾರಣ. ಇದು ಯಾವ ಪಕ್ಷಿ, ಪ್ರಾಣಿಯಿಂದಾಗಿ ಆಗುವುದಲ್ಲ. ಇದಕ್ಕೆ ಪ್ರಾರಂಭಿಕ ಹಂತದಲ್ಲಿ ಮಾತ್ರ ಚಿಕಿತ್ಸೆ   ಫಲಕಾರಿ. ಹಳ್ಳಿಯ ಜನ ಈಗಲೂ ಕುಪುಳು ಹಕ್ಕಿ Greater Coucal (ಬಾರದ್ವಾಜ ಪಕ್ಷಿ) ತೆಂಗಿನ ಗರಿಯಲ್ಲಿ ಕುಳಿತು ಮೂತ್ರ ಮಾಡಿದರೆ ತೆಂಗಿನ ಮರವೇ ಸತ್ತು ಹೋಗುತ್ತದೆ ಎಂದು ತಿಳಿದಿದ್ದಾರೆ. ಇದು ಈ ಹಕ್ಕಿಯಿಂದಾಗಿ ಆಗುವುದಲ್ಲ. ಹಕ್ಕಿಗಳು ಮೂತ್ರವನ್ನೇ ಮಾಡಲಾರವು. ಇದು ವಾತಾವರಣದ ಅನುಕೂಲ ಸ್ಥಿತಿ ಒದಗಿದಾಗ ಕೊಳೆತಿನಿ ಶಿಲೀಂದ್ರ ಬಾಧಿಸಿ ಉಂಟುಮಾಡುವ ರೋಗ.  ಸುಳಿ…

Read more
error: Content is protected !!