ಮಣ್ಣಿನ ಆರೋಗ್ಯ ತಿಳಿಯಲು ಅದರ ಪರೀಕ್ಷೆ .
ಮಣ್ಣು ಅದರಷ್ಟಕ್ಕೇ ಇದ್ದರೆ ಅಂದರೆ ಕಾಡು , ಮರಮಟ್ಟು ಬೆಳೆಯುತ್ತಾ ಇದ್ದರೆ ಅದರ ಆರೋಗ್ಯ ಸ್ಥಿತಿ ವ್ಯತ್ಯಾಸ ಆಗುವುದಿಲ್ಲ. ಬೆಳೆ ಬೆಳೆಸುವಾಗ ಬಳಸುವ ಬೆಳೆ ಪೋಷಕಗಳು ಮಣ್ಣಿನ ಗುಣವನ್ನು ಸ್ವಲ್ಪ ಮಟ್ಟಿಗೆ ವ್ಯತ್ಯಾಸ ಮಾಡುತ್ತವೆ. ಇದನ್ನು ಮಣ್ಣಿನ ಆರೋಗ್ಯ ಕೆಡುವುದು ಎಂದು ಹೇಳಬಹುದು. ಮಣ್ಣಿನ ಆರೋಗ್ಯ ಗುಣದ ಮೇಲೆ ನಾವು ಬೆಳೆಸುವ ಬೆಳೆಯ ಪ್ರತಿಫಲ ಇರುತ್ತದೆ. ಇದನ್ನು ತಿಳಿದು ಕೃಷಿ ಮಾಡಿದರೆ ನಿರೀಕ್ಷೆಯ ಫಲಿತಾಂಶ ಲಭ್ಯವಾಗುತ್ತದೆ. ಮಣ್ಣು ಸೃಷ್ಠಿಯ ಅತ್ಯದ್ಬುತ ಕೊಡುಗೆ. ಮಣ್ಣಿಲ್ಲದೆ ಯಾವಜೀವಿಯೂ ಬದುಕಲಾರದು, ಮಣ್ಣಿನಿಂದ…