ಸುಡುಮಣ್ಣು – ಇದು ಮಣ್ಣಿನ ಆರೋಗ್ಯ ರಕ್ಷಕ ಡಾಕ್ಟರ್.
ಎಲ್ಲಾ ತರಹದ ಮಣ್ಣು ಬೆಳೆಗಳಿಗೆ ಸೂಕ್ತವಲ್ಲ. ಕೆಲವು ಮಣ್ಣಿನಲ್ಲಿ ಬೆಳೆಗಳಿಗೆ ಹಾನಿಕಾರಕ ರೋಗಾಣುಗಳು ಮತ್ತು ಕೀಟದ ಮೊಟ್ಟೆಗಳು ಇರಬಹುದು. ಅಂತಹ ಸಂಶಯ ಇರುವ ಮಣ್ಣನ್ನು ಸ್ವಲ್ಪ ಬಿಸಿ ಪ್ರಕ್ರಿಯೆಗೆ ಒಳಪಡಿಸಿ ಸುಡುಮಣ್ಣಾಗಿ ಪರಿವರ್ತಿಸಿದರೆ, ಅದು ಪೂರ್ಣ ಸ್ಟೆರಿಲೈಸ್ ಮಾಡಿದ ಸ್ವಚ್ಚ ಶುದ್ಧ ಮಣ್ಣಾಗುತ್ತದೆ. ಮಣ್ಣನ್ನು ಸ್ವಲ್ಪ ಬಿಸಿ ಮಾಡಿದಾಗ ಅದಕ್ಕೆ ಕರಕಲು ಸಾವಯವ ತ್ಯಾಜ್ಯ ಸೇರಿದಾಗ ಅದು ಸಾವಯವ ಇಂಗಾಲವನ್ನು (Carbon – bio char ) ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಸಾವಯವ ತ್ಯಾಜ್ಯಗಳು ಮಣ್ಣನ್ನು ಜೈವಿಕವಾಗಿ ಶ್ರೀಮಂತಿಕೆಗೆ…