ಅಧಿಕ ಬೆಲೆ ಇರುವ ವಿದೇಶೀ ಹಣ್ಣು – ರಾಂಬುಟಾನ್.
ಕೆಲವು ವಿದೇಶೀ ಹಣ್ಣಿನ ಬೆಳೆಗಳು ಬ್ರಿಟೀಷರ ಕಾಲದಲ್ಲಿ (ಪೋರ್ಚುಗೀಸರಿಂದ) ಕೇರಳದ ಪಟ್ಟಣಂತಿಟ್ಟ ಪ್ರದೇಶದಲ್ಲಿ ಪರಿಚಯಿಸಲ್ಪಟ್ಟಿತ್ತಂತೆ. ಅದನ್ನು ಕೆಲವು ಕೇರಳಿಗರು ಅಭಿವೃದ್ದಿಪಡಿಸಿದರು. ಮತ್ತೆ ಕೆಲವರು ಹೊರ ದೇಶಗಳಿಂದ ಸಸಿ ಮೂಲ ತರಿಸಿ, ಬೇರೆ ಬೇರೆ ತಳಿಗಳಾಗಿ ಹೆಸರು ಕೊಟ್ಟು , ಈಗ ಇದನ್ನು ವಾಣಿಜ್ಯಿಕವಾಗಿ ಬೆಳೆಸುತ್ತಿದ್ದಾರೆ. ಅವುಗಳಲ್ಲಿ ಒಂದು ರಾಂಬುಟಾನ್ ಎಂಬ ಹಣ್ಣು. ಈ ಹಣ್ಣಿಗೆ ಸರಾಸರಿ ಕೊಳ್ಳುವ ಬೆಲೆ ರೂ.100 ಇದೆ. ರಾಂಬುಟಾನ್ ಇದು ದಕ್ಷಿಣ ಏಶಿಯಾ ದೇಶಗಳಾದ ಮಲೇಶಿಯಾ, ಇಂಡೋನೇಶಿಯಾ, ಥೈಲಾಂಡ್ ಮೂಲದ ವಿದೇಶೀ ಹಣ್ಣು….